ರಂಗಭೂಮಿ ಕಲಾವಿದ ಸುಂದರರ ಚಿಕಿತ್ಸೆಗೆ ಸವಾಕ್‌ನಿಂದ ಧನ ಸಹಾಯ ಹಸ್ತಾಂತರ

ಬೆಳ್ಳೂರು: ಹಾವು ಕಚ್ಚಿ ಚಿಕಿತ್ಸೆಯಲ್ಲಿರುವ ಕಾಯಿಮಲೆ ನಿವಾಸಿ, ರಂಗಭೂಮಿ ಕಲಾವಿದ ಸುಂದರ ಎಂಬವರ ಚಿಕಿತ್ಸೆಗಾಗಿ ಸವಾಕ್ ಸಂಘಟನೆಯ ಕಾಸರಗೋಡು ಜಿಲ್ಲಾ ಸಮಿತಿ, ಕಾರಡ್ಕ ಬ್ಲಾಕ್ ಸಮಿತಿ, ಅಭಿನಯ ಕಲಾ ತಂಡ ಕಾಸರಗೋಡು ಇವರ ಜಂಟಿ ಆಶ್ರಯದಲ್ಲಿ ಸಂಗ್ರಹಿಸಿದ ಮೊತ್ತವನ್ನು ಹಸ್ತಾಂತರಿಸಲಾಯಿತು. ಸುಂದರ ಈಗ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ.
ಸವಾಕ್ ಸಂಘಟನೆಯ ರಾಜ್ಯ ಕೋಶಾಧಿಕಾರಿ, ಜಿಲ್ಲಾ ಅಧ್ಯಕ್ಷ ಉಮೇಶ್ ಸಾಲಿಯಾನ್, ರಾಜ್ಯ ಸಮಿತಿ ಸದಸ್ಯೆ, ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, ಜಿಲ್ಲಾ ಉಪಾಧ್ಯಕ್ಷರಾದ ನರಸಿಂಹ ಬಲ್ಲಾಳ್ ಕಾಸರಗೋಡು, ಭಾರತಿ, ಅಭಿನಯ ಕಲಾತಂಡ ಕಾಸರಗೋಡು ಅಧ್ಯಕ್ಷ, ರಂಗಕಲಾವಿದ ಎ.ಬಿ. ಮಧುಸೂದನ ಬಲ್ಲಾಳ್, ಕಾರಡ್ಕ ಬ್ಲಾಕ್ ಕಾರ್ಯದರ್ಶಿ ಮೋಹನ ಬಲ್ಲಾಳ್, ರಂಗಕಲಾವಿದ ಗಂಗಾಧರ ಬಲ್ಲಾಳ್ ಮೊದಲಾದವರು ಸುಂದರರ ಮನೆಗೆ ತೆರಳಿ ಮೊತ್ತ ಹಸ್ತಾಂತರಿಸಿದರು.

You cannot copy contents of this page