ಉಪ್ಪಳ: ಶಾಲಾ ಬಸ್ ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರರಾದ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಸಂಭವಿಸಿದೆ. ಇಂದು ಬೆಳಿಗ್ಗೆ 7.45 ರ ವೇಳೆ ಬಾಯಾರು ಪೆಟ್ರೋಲ್ ಪಂಪ್ ಸಮೀಪ ರಸ್ತೆಯಲ್ಲಿ ಅಪಘಾತವುಂಟಾಗಿದೆ. ಬಾಯಿಕಟ್ಟೆ ಕಳಾಯಿ ನಿವಾಸಿ ಮೊಹಮ್ಮದ್ ಸಾದಿಕ್ ಹಾಗೂ ಭಂಡಾರ ಕಳಾಯಿಯ ಮೊಹಮ್ಮದ್ ಮೊನುದ್ದೀನ್ ಎಂಬಿವರು ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಇಬ್ಬರು ಬಾಯಿಕಟ್ಟೆಯಲ್ಲಿರುವ ಪಯ್ಯಕ್ಕಿ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿಯ ವಿದ್ಯಾರ್ಥಿಗಳಾಗಿದ್ದಾರೆ. ಇವರು ಪೈವಳಿಕೆಯಿಂದ ಬಾಯಾರು ಭಾಗಕ್ಕೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾರ ಪೈವಳಿಕೆ ಭಾಗಕ್ಕೆ ತೆರಳುತ್ತಿದ್ದ ಶಾಲಾ ಬಸ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
