ಮಂಜೇಶ್ವರ: ಮನೆಯಿಂದ ಮದ್ರಸಕ್ಕೆ ತೆರಳುತ್ತಿದ್ದ ಒಂಭತ್ತರ ಹರೆಯದ ಬಾಲಕನಿಗೆ ಬೀದಿ ನಾಯಿ ಕಡಿದು ಗಾಯಗೊಳಿಸಿದ ಘಟನೆ ನಡೆದಿದೆ.
ಮಂಜೇಶ್ವರ ಪಾಂಡ್ಯಾರ ನಿವಾಸಿ ಅಬ್ದುಲ್ ರಾಶಿದ್‌ರ ಪುತ್ರ ಅಬೂ ಬಕರ್ ರಫಾನ್ ಎಂಬಾತ ನಾಯಿ ಕಡಿತದಿಂದ ಗಾಯಗೊಂಡಿದ್ದಾನೆ. ಕಾಲಿಗೆ ಗಾಯಗೊಂಡ ಬಾಲಕನನ್ನು ಕಾಸರಗೋಡು ಜನರಲ್ ಆಸತ್ರೆ ಯಲ್ಲಿ ದಾಖಲಿಸಲಾಗಿದೆ. ಮಂಜೇಶ್ವರ ಇನ್ಫೆಂಟ್ ಜೀಸಸ್ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ಬಾಲಕ ನಿನ್ನೆ ಸಂಜೆ ಶಾಲೆಬಿಟ್ಟು ಮನೆಗೆ ತಲುಪಿ ಬಳಿಕ ಮದ್ರಸಕ್ಕೆ ತೆರಳಿದ್ದನು. ಈ ವೇಳೆ ರಸ್ತೆಯಲ್ಲಿದ್ದ ಬೀದಿ ನಾಯಿ ದಾಳಿ ನಡೆಸಿದೆಯೆಂದು ತಿಳಿಸಲಾ ಗಿದೆ. ಅಲ್ಪ ಬಿಡುವಿನ ಬಳಿಕ ಜಿಲ್ಲೆಯ ವಿವಿಧೆಡೆಗಳಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರಗೊಂಡಿದೆ. ಮೊನ್ನೆಯಷ್ಟೇ ನೀರ್ಚಾಲು ಬಳಿ ಮಗು ಸಹಿತ ೬ ಮಂದಿಗೆ ಬೀದಿ ನಾಯಿಗಳು ಕಡಿದು ಗಾಯಗೊಳಿಸಿದ ಘಟನೆ ನಡೆದಿತ್ತು. ಬೀದಿನಾಯಿಗಳ ಹಾವಳಿಯಿಂದ ನಡೆದು ಹೋಗಲು ಸಾಧ್ಯವಾಗುತ್ತಿಲ್ಲವೆಂದು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬರುತ್ತಿದೆ.