ಉಪ್ಪಳ: ಪ್ಲಸ್‌ಟು ವಿದ್ಯಾರ್ಥಿ ಯೋರ್ವ ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಉಪ್ಪಳ ಭಗವತಿ ರಸ್ತೆ ಅಂಗನವಾಡಿ ಬಳಿಯ ನಿವಾಸಿ ಅಮ್ಜತ್ ಅಲಿ ಎಂಬವರ ಪುತ್ರ ಮುಹಮ್ಮದ್ ಕೈಫ್ (17) ನಾಪತ್ತೆಯಾ ಗಿರುವುದಾಗಿ ದೂರಲಾಗಿದ. ನಿನ್ನೆ ಮಧ್ಯಾಹ್ನ 12.30ರ ವೇಳೆ ಮನೆಯಿಂದ ಹೊರಗೆ ತೆರಳಿದ್ದು ಬಳಿಕ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. 8 ತಿಂಗಳ ಹಿಂದೆಯೂ ಈತ ನಾಪತ್ತೆಯಾಗಿದ್ದು, ಬಳಿಕ ಪೊಲೀಸರು ಶೋಧ ನಡೆಸುತ್ತಿದ್ದಾಗ ಮುಂಬಯಿಯಿಂದ ಪತ್ತೆಯಾಗಿದ್ದಾನೆನ್ನಲಾಗಿದೆ. ಈತ ಇದೀಗ ನಾಪತ್ತೆಯಾಗಿರುವುದರಿಂದ ಪೊಲೀಸರು ಕೇಸು ದಾಖಲಿಸಿ ಶೋಧ ಆರಂಭಿಸಿದ್ದಾರೆ.







