13ರ ಬಾಲಕ ಚಲಾಯಿಸಿದ ಸ್ಕೂಟರ್ ಅಪಘಾತಕ್ಕೀಡಾದ ಘಟನೆ: ವ್ಯಕ್ತಿಪಲ್ಲಟ ನಡೆಸಿದ ಬಗ್ಗೆ ಯುವತಿ ವಿರುದ್ಧ ಕೇಸು

13ರ ಬಾಲಕ ಚಲಾಯಿಸಿದ ಸ್ಕೂಟರ್ ಅಪಘಾತಕ್ಕೀಡಾದ ಘಟನೆ: ವ್ಯಕ್ತಿಪಲ್ಲಟ ನಡೆಸಿದ ಬಗ್ಗೆ ಯುವತಿ ವಿರುದ್ಧ ಕೇಸು

ಕಾಸರಗೋಡು: 13ರ ಬಾಲಕ ಚಲಾಯಿಸಿದ ಸ್ಕೂಟರ್ ಅಪಘಾತಕ್ಕೀ ಡಾದ ಘಟನೆಯಲ್ಲಿ ವ್ಯಕ್ತಿಪಲ್ಲಟ ನಡೆಸಿದ ಯುವತಿ ವಿರುದ್ಧ ಹೊಸದುರ್ಗ ಪೊಲೀ ಸರು ಸ್ವತಃ ಕೇಸು ದಾಖಲಿಸಿದ್ದಾರೆ. ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್‌ರ ದೂರಿನಂತೆ ನ್ಯಾಯಾಲಯದಲ್ಲಿ ತಪ್ಪು ಹೇಳಿಕೆ ನೀಡಿರುವುದಕ್ಕೆ ಕಾಞಂಗಾಡ್, ವಡಗರಮುಖ್‌ನ ಹಂಸರ ಪತ್ನಿ ಪಿ. ಅನೀಸ (42)ರ ವಿರುದ್ಧ ಕೇಸು ದಾಖಲಿಸಲಾಗಿದೆ.

2024 ನವೆಂಬರ್ 17ರಂದು ಘಟನೆ ನಡೆದಿತ್ತು. ಅಪಘಾತದ ಬಗ್ಗೆ ಹೊಸದುರ್ಗ ಪ್ರಥಮ ದರ್ಜೆ ನ್ಯಾಯಾಲಯ ಕೇಸು ದಾಖಲಿಸಿತ್ತು. ಪುಂಜಾವಿಯ ಶಂಸೀರ್ ಎಂಬಾತ ಮಗುವನ್ನು ಸ್ಕೂಟರ್‌ನ ಹಿಂಬದಿ ಕುಳ್ಳಿರಿಸಿಕೊಂಡು ವಡಗರಮುಖ್ ಭಾಗಕ್ಕೆ ತೆರಳುತ್ತಿದ್ದ ಮಧ್ಯೆ ದಿಡೀರ್ ಆಗಿ ಬ್ರೇಕ್ ಹಾಕಿದಾಗ ಮಗು ಎಸೆಯಲ್ಪಟ್ಟು ಗಂಭೀರ ಗಾಯವುಂಟಾಗಿತ್ತೆಂದು ಕೇಸು ದಾಖಲಿಸಲಾಗಿತ್ತು. ನ್ಯಾಯಾಲಯದ ನಿರ್ದೇಶ ಪ್ರಕಾರ ಪೊಲೀಸರು ಸಮಗ್ರವಾಗಿ ನಡೆಸಿದ ತನಿಖೆಯಲ್ಲಿ ಈ ದೂರು ನಕಲಿ ಎಂದು ಪತ್ತೆಹಚ್ಚಲಾಗಿದೆ. ಅಪಘಾತ ಸಮಯದಲ್ಲಿ ಸ್ಕೂಟರ್ ಚಲಾಯಿಸಿ ರುವುದು ಬಾಲಕನಾಗಿದ್ದಾನೆಂದು ಪೊಲೀಸರು ಪತ್ತೆಹಚ್ಚಿದ್ದಾರೆ. ವಿಮೆ ಮೊತ್ತ ಲಭಿಸಲು ವ್ಯಕ್ತಿ ಪಲ್ಲಟ ನಡೆಸಿರುವುದಾ ಗಿಯೂ, ಅಪಘಾತ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ನ್ಯಾಯಾಲಯಕ್ಕೆ ವರದಿ ನೀಡುವುದಾ ಗಿಯೂ ಪೊಲೀಸರು ತಿಳಿಸಿದ್ದಾರೆ.

You cannot copy contents of this page