ಕುಂಬಳೆ: 17ರ ಹರೆಯದ ಬಾಲಕ ಚಲಾಯಿಸುತ್ತಿದ್ದ ಸ್ಕೂಟರನ್ನು ಕುಂಬಳೆ ಪೊಲೀಸರು ಕಸ್ಟಡಿಗೆ ತೆಗೆದು ಅದರ ಆರ್‌ಸಿ ಮಾಲಕಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಶಿರಿಯ ಶಾಲೆ ಸಮೀಪ ನಿನ್ನೆ ಸಂಜೆ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್ ಕಸ್ಟಡಿಗೆ ತೆಗೆಯಲಾಗಿದೆ. ಬಳಿಕ ನಡೆಸಿದ ತನಿಖೆ ಯಲ್ಲಿ ಸ್ಕೂಟರ್ ಬಾಲಕನ ಸ್ನೇಹಿತನ ತಾಯಿಯಾದ ಬಂಬ್ರಾಣ ದಿನೇಶ್ ಬೀಡಿ ಕಂಪೆನಿ ಬಳಿಯ ಮರಿಯಮ್ಮತ್ ಎಚ್. ಪರ್ಸಾಯಿ (26) ಎಂಬವರದ್ದೆಂದು ತಿಳಿದು ಬಂದಿದ್ದು, ಇದರಿಂದ ಈಕೆ ವಿರುದ್ಧ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.







