ಕುಂಬಳೆ: ನಾಯ್ಕಾಪುನಲ್ಲಿ ಪ್ಲಾಸ್ಟಿಕ್ ಫ್ಯಾಕ್ಟರಿಯ ಗೇಟ್‌ನ ಸಮೀಪ ಸ್ಕೂಟರ್‌ವೊಂದು ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಲ್ಲಿಕೋಟೆ ಆರ್‌ಟಿಒ ಕಚೇರಿಯಲ್ಲಿ ನೋಂದಾಯಿಸಲಾದ ಸ್ಕೂಟರ್ ಇದಾಗಿದೆಯೆಂದು ತಿಳಿದು ಬಂದಿದೆ.
ಕಳೆದ ಒಂದು ವಾರದಿಂದ ಸ್ಕೂಟರ್ ಇಲ್ಲಿ ನಿಲ್ಲಿಸಲಾಗಿದ್ದು ಇದು ಸಂಶಯಕ್ಕೆಡೆಯಾಗಿದೆ. ಇದೇ ವೇಳೆ ಸ್ಕೂಟರ್ ಇಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿರುವ ಬಗ್ಗೆ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆಯೆಂದೂ ಆದರೆ ಈ ಬಗ್ಗೆ ತನಿಖೆಗೆ ಪೊಲೀಸರು ಮುಂದಾಗಿಲ್ಲವೆಂದು ಫ್ಯಾಕ್ಟರಿ ಅಧಿಕಾರಿಗಳು ತಿಳಿಸುತ್ತಿದ್ದಾರೆ.