ಕಾಸರಗೋಡು: ನಗರದ ಕರಂದಕ್ಕಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಕಾರು ಮತ್ತು ಸ್ಕೂಟಿ ಢಿಕ್ಕಿ ಹೊಡೆದು ಸ್ಕೂಟಿ ಸವಾರ ಉಳಿಯತ್ತಡ್ಕದ ಮುನೀರ್ (5೦) ಎಂಬವರು ಗಾಯಗೊಂಡಿದ್ದಾರೆ. ಅದನ್ನು ಕಂಡ ಕಾಸರಗೋಡು ಅಗ್ನಿಶಾಮಕದಳ ಗಾಯಾಳುವನ್ನು ತಕ್ಷಣ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದರು. ಅಪಘಾತಕ್ಕೀಡಾದ ಸ್ಕೂಟಿಯಲ್ಲಿ ಮುನೀರ್‌ರ ಪುತ್ರಿಯೂ ಇದ್ದರು. ಅವರಿಗೆ ಯಾವುದೇ ಗಾಯವುಂಟಾಗಿಲ್ಲ.






