ಪತ್ತನಂತಿಟ್ಟ: ಶಬರಿಮಲೆ ದೇಗುಲದ ಸಂದರ್ಶನಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಬೆಳಿಗ್ಗೆ ಬಂದ ಹೆಲಿಕಾಪ್ಟರ್‌ನ ಚಕ್ರ ಹೆಲಿಪ್ಯಾಡ್ನ ಕಾಂಕ್ರೀಟ್‌ನಲ್ಲಿ ಹೂತು ಹೋಗಿದೆ. ರಾಷ್ಟ್ರಪತಿ ಪ್ರಯಾಣಿಸುವ ಹೆಲಿಕಾಪ್ಟರ್‌ನ್ನು ನಿಲೈಕಲ್‌ನ ಹೆಲಿಪ್ಯಾಡ್‌ನಲ್ಲಿ ಇಳಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಬಳಿಕ ಅದನ್ನು ಪತ್ತನಂತಿಟ್ಟ ಪ್ರಮಾಡಂ ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಹೆಲಿಪ್ಯಾಡ್‌ನಲ್ಲಿ ಇಂದು ಬೆಳಿಗ್ಗೆ ಇಳಿದ ರಾಷ್ಟ್ರಪತಿಯವರು ನಂತರ ಕಾರಿನಲ್ಲಿ ಬಿಗಿ ಭದ್ರತೆಯೊಂದಿಗೆ ಪಂಪಾಕ್ಕೆ ಪ್ರಯಾಣ ಮುಂದುವರಿಸಿದರು. ಅದಾದ ಬಳಿಕ ಹೆಲಿಕಾಪ್ಟರ್‌ನ ಚಕ್ರ ಹೆಲಿಪ್ಯಾಡ್ನ ಕಾಂಕ್ರೀಟ್‌ನಲ್ಲಿ ಹೂತು ಹೋಗಿದೆ. ಇದರಿಂದ ಹೆಲಿಕಾಪ್ಟರನ್ನು ಮುಂದಕ್ಕೆ ಸಾಗಿಸಲು ಸಾಧ್ಯವಾಗದೆ ಅಲ್ಲೇ ಸಿಲುಕಿಕೊಂಡಿತು. ನಂತರ ಅಗ್ನಿಶಾಮಕದಳ ಮತ್ತು ಪೊಲೀಸರು ಸೇರಿ ದೂಡಿ ಹೂತುಹೋದ ಹೆಲಿಕಾಪ್ಟರ್‌ನ ಚಕ್ರವನ್ನು ಮೇಲಕ್ಕೆತಿ ಮುಂದಕ್ಕೆ ಸಾಗಿಸುವಲ್ಲಿ ಲಫಲರಾದರು. ಇದು ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದೆ.
