ನಾಗ್ಪುರ: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರ ನಾಗ್ಪುರದಲ್ಲಿರುವ ಪಿ.ಎ. ಬಂಗಲೆಯಲ್ಲಿ ಕಳವಿಗೆತ್ನಿಸಲಾಗಿದೆ. ಅದಕ್ಕೆ ಸಂಬಂಧಿಸಿ ಪ್ರಸ್ತುತ ಬಂಗಲೆಯ ಸೆಕ್ಯುರಿಟಿ ಗಾರ್ಡ್ ರತನ್ ಕಾರ್ತಿಕ್ ಕಸ್ತೂರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗಡ್ಕರಿಯ ಆಪ್ತ ಸಹಾಯಕ ಕೌಸ್ತುಭ್ ನೀಡಿದ ದೂರಿನಂತೆ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋಮವಾರ ರಾತ್ರಿ ೧೦.೫೫ರ ವೇಳಗೆ ಆರೋಪಿ ಸಚಿವರ ಬಂಗಲೆಯ ಕೊಠಡಿಗೆ ಅಕ್ರಮ ವಾಗಿ ಪ್ರವೇಶಿಸಿ ಕಳವುಗೈಯ್ಯ ಲೆತ್ನಿಸಿ ರುವುದಾಗಿ ಪೊಲೀಸರಿಗೆ ನೀಡಲಾದ ದೂರಿನಲ್ಲಿ ಹೇಳಲಾಗಿದೆ.






