ಹಿರಿಯ ಗುರುಸ್ವಾಮಿ ನಿಧನ

ವರ್ಕಾಡಿ: ಹಿರಿಯ ಗುರುಸ್ವಾಮಿ, ಕೆಳಗಿನ ತಾಡ ನಿವಾಸಿ ಕೆ.ಪಿ. ರಾಮಯ್ಯ ನಾಯ್ಕ್ (80) ನಿಧನ ಹೊಂದಿದರು. ವರ್ಕಾಡಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಸುಂರದಕಟ್ಟೆ ಇದರ ಸ್ಥಾಪಕ ಸದಸ್ಯ, ಅಧ್ಯಕ್ಷ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜನಸಂಘ ಕಾಲದಿಂದಲೇ ಸಂಘಪರಿವಾರ ಕಾರ್ಯಕರ್ತ ರಾಗಿದ್ದು, ಪ್ರಸ್ತುತ ಬಿಜೆಪಿ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಪದ್ಮಾವತಿ, ಪುತ್ರಿ ದಾಕ್ಷಾಯಿಣಿ, ಅಳಿಯ ಸಚ್ಚಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೃತರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಗೋಪಿನಾಥ್ ಮೊರತ್ತಣೆ, ಪಂ. ಸದಸ್ಯ ರಾಜ್‌ಕುಮಾರ್ ಶೆಟ್ಟಿ ಮುಟ್ಲ, ಯತಿರಾಜ್ ಶೆಟ್ಟಿ, ನಾಗೇಶ್ ಬಳ್ಳೂರು, ಜಗದೀಶ್, ಶ್ರೀವತ್ಸಾ ಭಟ್ ಭೇಟಿ ನೀಡಿ ಸಂತಾಪ ಸೂಚಿಸಿದರು. ನಿಧನಕ್ಕೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ವರ್ಕಾಡಿ, ಸ್ನೇಹಾ ಫ್ರೆಂಡ್ಸ್ ವರ್ಕಾಡಿ, ಕೇಸರಿ ಫ್ರೆಂಡ್ಸ್ ವರ್ಕಾಡಿ, ಜೈಗಣೇಶ್ ಭಕ್ತವೃಂದ ಮಜೀರ್ಪಳ್ಳ, ಅಯ್ಯಪ್ಪ ಮಂದಿರ ಸುಂಕದಕಟ್ಟೆ, ಕೆಳಗಿನ ತಾಡ ಭಂಡಾರ ತರವಾಡು ಮನೆ ಸಮಿತಿ ಸಂತಾಪ ಸೂಚಿಸಿದೆ.

RELATED NEWS

You cannot copy contents of this page