ಹಿರಿಯ ಖಾಸಗಿ ಬಸ್ ನಿರ್ವಾಹಕ ನಿಧನ

ಮುಳ್ಳೇರಿಯ: ಖಾಸಗಿ ಬಸ್‌ನ ಹಿರಿಯ ನಿರ್ವಾಹಕನಾಗಿದ್ದ ಮುಳ್ಳೇರಿಯ ನಿವಾಸಿ ಶೇಖ್ ಎಂ.ಎಸ್. ಆದಂ (75) ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಹಿರಿಯ ಸಿಪಿಎಂ ಕಾರ್ಯಕರ್ತನಾಗಿದ್ದಾರೆ. ಮೃತರು ಪತ್ನಿ ರಸಿಯಬಾನು, ಮಕ್ಕಳಾದ ಶಮೀರ್, ರಶೀದ್, ಫೌಸಿಯಾಬಾನು, ನಿಲೋಫರ್, ಅಳಿಯ- ಸೊಸೆಯಂದಿರಾದ ಮೈನಾಸ್, ಶಿಬಾ, ಖಲೀಲ್, ಮಜೀದ್, ಸಹೋದರಿ ಶಕೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page