ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ನಿಧನ

ಕಾಸರಗೋಡು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ, ಅಣಂಗೂರು ಜೆ.ಪಿ. ನಗರದ ರಾಮಣ್ಣ (80) ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿರು. ಈ ಹಿಂದೆ ಟೈಲರಿಂಗ್ ವೃತ್ತಿ ನಡೆಸುತ್ತಿದ್ದರೂ, ಬಳಿಕ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಸೆಕ್ಯೂರಿಟಿ ನೌಕರನಾಗಿದ್ದರು. ಕರಂದಕ್ಕಾಡು ವೀರ ಹನುಮಾನ್ ವ್ಯಾಯಾಮ ಶಾಲೆಯ ಹಿರಿಯ ಸದಸ್ಯರೂ ಆಗಿದ್ದರು. ಇವರ ಪತ್ನಿ ಗಿರಿಜ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರಾಜೇಶ್, ಹೇಮಲತ, ಅಳಿಯ ಪದ್ಮನಾಭ (ಮಂಗಳೂರು), ಸೊಸೆ ವಿದ್ಯಾ, ಸಹೋದರರಾದ ನಾರಾಯಣ ಮಂಗಳೂರು, ಗಣೇಶ ಭಗವತಿನಗರ, ಸೋಮಪ್ಪ ಕೂಡ್ಲು, ಶಿವ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಸಹೋದರಿಯರಾದ ಸುಮತಿ, ಸುನಂದ ಎಂಬಿವರು ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page