ಸೇವಾ ಭಾರತಿಯಿಂದ ಸೀತಾಂಗೋಳಿ ಪೇಟೆ ಶುಚೀಕರಣ

ಸೀತಾಂಗೋಳಿ: ಸ್ವಚ್ಛತಾ ದಿನಾ ಚರಣೆಯಂಗವಾಗಿ ಸೇವಾ ಭಾರತಿ ಯ ಪುತ್ತಿಗೆ ಘಟಕದ ಆಶ್ರಯದಲ್ಲಿ ಸೀತಾಂಗೋಳಿ ಪೇಟೆಯನ್ನು ಮಾಲಿನ್ಯಮುಕ್ತಗೊಳಿಸಲಾಯಿತು. ಪೇಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಸಹಿತ ಕಸಗಳನ್ನು ತೆಗೆದÀÄ ಸ್ವಚ್ಛಗೊಳಿಸಿ ಸ್ವಚ್ಛತೆಯ ಕುರಿತಾಗಿ ಉತ್ತಮ ಸಂದೇಶವನ್ನು ನೀಡಲಾಯಿತು. ಪ್ರವೀಣ್ ಕುಮಾರ್, ಅಪ್ಪಣ್ಣ, ಉಮಲತಾ, ದಿನೇಶ್ ಬಬ್ಬರಿಯಕಲ್ಲು, ಉಷಾ, ಶಶಿಕಲಾ ಅನೋಡಿಪಳ್ಳ, ಪ್ರಸನ್ನ, ಅಜಿತ್ ಕುಮಾರ್, ಅರುಣ್ ಕುಮಾರ್, ಉದಯ ಮರಕ್ಕಾಡ್ ಮೊದಲಾ ದವರು ನೇತೃತ್ವ ವಹಿಸಿದ್ದರು. ಸುತ್ತು ಮುತ್ತಲಿನ ಸೇವಾ ಭಾರತಿಯ ಕಾರ್ಯಕರ್ತರು ಭಾಗವಹಿಸಿದರು. ಸ್ವಚ್ಛತೆಯ ಮೂಲಕ ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಿಸುವ ಅಗತ್ಯದ ಬಗ್ಗೆ ಪ್ರಮುಖರು ಮಾತನಾಡಿದರು. ಸೇವಾಭಾರತಿಯ ಸೇವಾ ಕಾರ್ಯಗಳು ನಿರಂತರ ಮುಂದುವರಿಯಲಿದ್ದು, ಸಮಾಜದ ಸಹಕಾರವನ್ನು ನಿರೀಕ್ಷಿಸುವುದಾಗಿ ಅವರು ತಿಳಿಸಿದರು.

You cannot copy contents of this page