ಚೇರಂಗೈಯಲ್ಲಿ ತೀವ್ರ ಕಡಲ್ಕೊರೆತ: ಸಮುದ್ರಪಾಲಾದ ರಸ್ತೆ

ಕಾಸರಗೋಡು: ಕಾಸರಗೋಡು ಬಳಿಯ ಚೇರಂಗೈಯಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದು ಇದರಿಂದ ಸಮೀಪದ ರಸ್ತೆ ಸಮುದ್ರಪಾಲಾಗಿದೆ. ಮಾತ್ರವಲ್ಲದೆ ಈ ಪರಿಸರದ ಹಲವು ತೆಂಗಿನ ಮರಗಳೂ ಬುಡಸಹಿತ ಮಗುಚಿ ಬಿದ್ದಿವೆ. ಸಿಪಿಸಿಆರ್‌ಐ  ಪಕ್ಕದ ಸಮುದ್ರ ಕಿನಾರೆಯ  ರಸ್ತೆಯನ್ನೂ  ಸಮುದ್ರ ಭಾಗಶಃ ನುಂಗಿದೆ. ಈ ಪ್ರದೇಶದ ಹಲವು ತೆಂಗಿನ ಮರಗಳೂ ಮಗುಚಿಬಿದ್ದಿವೆ. ಕಡಲ್ಕೊರೆತ ಇನ್ನೂ ಮುಂದುವರಿ ಯುತ್ತಿದ್ದು ಇದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.

ಮೂರು ವರ್ಷಗಳ ಹಿಂದೆಯೂ ಚೇರಂಗೈಯಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿತ್ತು. ಆ ವೇಳೆ  ಹಲವು ಮನೆಗಳು ಹಾಗೂ ತೆಂಗಿನ ಮರಗಳು ಕುಸಿದು ಬಿದ್ದು ಭಾರೀ ನಷ್ಟ ಉಂಟಾಗಿತ್ತು. ಕಡಲ್ಕೊರೆತ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಲು ಕಗ್ಗಲ್ಲುಗಳನ್ನು ತಂದಿಳಿಸಲಾಗಿತ್ತಾ ದರೂ ಅದೂ ಸಮುದ್ರ ಪಾಲಾಗಿತ್ತು. ಇದರಿಂದಾಗಿ ಹೊಯ್ಗೆ ತುಂಬಿಸಿದ ಗೋಣಿ ಚೀಲಗಳ  ಗೋಡೆ ನಿರ್ಮಿಸ ಲಾಗಿತ್ತು. ಮಳೆ ಇನ್ನಷ್ಟು ಬಿರುಸುಗೊಂ ಡಲ್ಲಿ ಕಡಲ್ಕೊರೆತವೂ ತೀವ್ರಗೊಳ್ಳುವ ಸಾಧ್ಯತೆ ಇದೆ.  ಹಾಗಾದಲ್ಲಿ ಅದರಿಂದ ಭಾರೀ  ಅನಾಹುತ ಉಂಟಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ  ತುರ್ತು ಗಮನ ಹರಿಸಿ ಸಮಸ್ಯೆಗೆ ತ್ವರಿತ ಪರಿಹಾರ ಕಂಡುಕೊಳ್ಳ ಬೇಕೆಂದೂ ಅವರು ಆಗ್ರಹಪಟ್ಟಿದ್ದಾರೆ.

You cannot copy contents of this page