ಬೆಂಗಳೂರು: ವಿವಾಹ ಭರವಸೆ ನೀಡಿ ಯುವತಿಗೆ ದೌರ್ಜನ್ಯಗೈದ ಕೇರಳೀಯ ಕ್ರಿಕೆಟ್ ಕೋಚ್ ವಿರುದ್ಧ ಕೇಸು ದಾಖಲಿಸಲಾಗಿದೆ. ಬೆಂಗಳೂರು ಗೋಟಿಗೆರೆಯ ಖಾಸಗಿ ಶಾಲೆಯ ಕೋಚ್ ಆದ ಅಭಯ್ ಮ್ಯಾಥ್ಯು(40) ವಿರುದ್ಧ ಕೋಣನಕುಂಟೆ ಪೊಲೀಸರು ದೌರ್ಜನ್ಯ ಪ್ರಕರಣ ಕೇಸು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಆರೋಪಿ ತಲೆಮರೆಸಿಕೊಂ ಡಿದ್ದು ಈತನಿಗಾಗಿ ಹುಡುಕಾಟ ನಡೆಸಿದ್ದಾರೆ. ಬನ್ನೇರುಘಟ್ಟ ರಸ್ತೆ ಬಡಾವಣೆಯ ಸಂತ್ರಸ್ತೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಗೆ ಸೂಚನೆ ನೀಡಲಾಗಿದ್ದು, ಈಗ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಬನ್ನೇರುಘಟ್ಟ ಶಾಲೆಯೊಂದರಲ್ಲಿ ಆರೋಪಿ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ. ಕ್ರಿಕೆಟ್ ಅಕಾಡೆಮಿಯನ್ನು ಈತ ನಡೆಸುತ್ತಿದ್ದು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದನು. ಪತಿಯಿಂದ ದೂರವಾಗಿದ್ದ ಮಹಿಳೆಯೊಬ್ಬರು ಪುತ್ರನನ್ನು ಅಕಾಡೆಮಿಗೆ ಕರೆದುಕೊಂಡು ಬರುತ್ತಿದ್ದು, ಪರಿಚಯಗೊಂಡು ಅವರನ್ನು ವಿವಾಹವಾಗುವುದಾಗಿ ನಂಬಿಸಿ ದೌರ್ಜನ್ಯವೆಸಗಲಾಗಿದೆ ಯೆಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರುನೀಡಿದ ಮಹಿಳೆಗೆ ನಾನು ಮೋಸ ಮಾಡಿಲ್ಲ. ಅವರ ಜೊತೆಗೆ ಬದುಕುವುದಾಗಿಯೂ ಜಮೀನು ವಿಚಾರಕ್ಕೆ ಕೇರಳಕ್ಕೆ ತೆರಳಿದ್ದು ಆದಷ್ಟು ಬೇಗ ಬೆಂಗಳೂರಿಗೆ ತಲುಪಿ ಪೊಲೀಸರಿಗೆ ಮಾಹಿತಿ ನೀಡುವುದಾಗಿ ಆರೋಪಿ ಮ್ಯಾಥ್ಯು ಪೊಲೀಸರಲ್ಲಿ ತಿಳಿಸಿದ್ದಾನೆನ್ನಲಾಗಿದೆ.