ಕಾಸರಗೋಡು: ಮದುವೆಯಾಗುವುದಾಗಿ ಭರವಸೆಯೊಡ್ಡಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಬೆಂಗಳೂರಿನಲ್ಲಿ ಸೆರೆ ಹಿಡಿಯಲಾಗಿದೆ. ಪಡನ್ನ ಕೈಪ್ಪಾಟ್‌ನ ಅಬ್ದುಲ್ ಮನಾಫ್ (29) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಓರ್ವ ಯುವತಿ ನೀಡಿದ ದೂರಿ ನಂತೆ ಈತನ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಕಾಞಂಗಾಡ್ ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್ ಮೇಲ್ನೋಟದಲ್ಲಿ ಚಂದೇರ ಇನ್ಸ್ ಪೆಕ್ಟರ್ ಎಂ. ಪ್ರಶಾಂತ್‌ರ ನೇತೃತ್ವದಲ್ಲಿ ಎಸ್‌ಐ ಗಳಾದ ಜಿ.ಒ. ಸದಾನಂದನ್, ರಘುನಾಥನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಶೈಜು ವೆಳ್ಳೂರು, ರಂಜಿತ್ ಎಂಬಿವರು ಸೇರಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ಆರೋಪಿಗೆ 14 ದಿನಗಳ ರಿಮಾಂಡ್ ವಿಧಿಸಲಾಗಿದೆ.







