ಕಾಸರಗೋಡು: ಇಂಡಿಯ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿ ಗಿನ್ನೆಸ್ ರೆಕಾರ್ಡ್‌ಗೆ ಕಾಯುತ್ತಿದ್ದ ಎಸ್‌ಎಫ್‌ಐ ನೇತಾರ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಡನ್ನಕ್ಕಾಡ್ ಕರುವಳದ ಪವಿತ್ರನ್ ಎಂಬವರ ಪುತ್ರ ಶ್ರೀಹರಿ (21) ಮೃತ ಯುವಕ. ಪಡನ್ನಕ್ಕಾಡ್‌ನ ನೆಹರೂ ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿರುವ ಶ್ರೀಹರಿ ಎಸ್‌ಎಫ್‌ಐ ಕಾಲೇಜು ಘಟಕದ ಉಪಾಧ್ಯಕ್ಷನೂ ಆಗಿದ್ದರು.
ನಿನ್ನೆ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ ೮ ಗಂಟೆ ಮಧ್ಯೆ ಮನೆಯಲ್ಲಿ ಬೇರ‍್ಯಾರೂ ಇಲ್ಲದ ಸಂದರ್ಭದಲ್ಲಿ ಶ್ರೀಹರಿ ನೇಣು ಬಿಗಿದಿರುವುದಾಗಿ ತಿಳಿದು ಬಂದಿದೆ. ಅದನ್ನು ಕಂಡ ಮನೆಯವರು ಕೂಡಲೇ ಶ್ರೀಹರಿಯನ್ನು ಜಿಲ್ಲಾಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗ ಲಿಲ್ಲ. ಒಂದು ಬೆರಳಿನಲ್ಲಿ ಒಂದು ಗಂಟೆ ಕಾಲ ನಿರಂತರವಾಗಿ ಪುಸ್ತಕ ತಿರುಗಿಸಿ ಇವರು ಇಂಡಿಯ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದರು. ದುರ್ಗಾ ಶಾಲೆಯಲ್ಲಿ ಪ್ಲಸ್ ಟು ಕಲಿಯುತ್ತಿದ್ದಾಗ ಈ ಸಾಧನೆಗೈದಿದ್ದರು. ಗಿನ್ನೆಸ್ ಬುಕ್‌ನಲ್ಲೂ ಸ್ಥಾನ ಗಳಿಸಲು ಕಾದು ನಿಂತಿದ್ದರು. ಈ ಮಧ್ಯೆ ಅವರು ಯಾಕಾಗಿ ನೇಣು ಬಿಗಿದಿದ್ದಾರೆಂದು ತಿಳಿದು ಬಂದಿಲ್ಲ. ಘಟನೆ ಬಗ್ಗೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ತಾಯಿ ಶಾಂತಿ, ಸಹೋದರಿ ಶ್ರೀಕುಟ್ಟಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.