ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಪ್ರತಾಪನಗರ ಸಮೀಪದ ತಿಂಬರ ರಸ್ತೆಗೆ ಇಂಟರ್‌ಲಾಕ್ ಅಳವಡಿಸಲಾಗಿದ್ದು, ಈಗ ಇಂಟರ್ ಲಾಕ್ ಎದ್ದು ಸಡಿಲಗೊಂಡು ಅಲುಗಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದಾಗಿ ಊರವರು ತಿಳಿಸಿದ್ದಾರೆ. ಹಲವು ವರ್ಷಗಳ ಹಿಂದೆ ಸುಮಾರು ನೂರು ಮೀಟರ್ ರಸ್ತೆಗೆ ಇಂಟರ್ ಲಾಕ್ ಅಳವಡಿಸಲಾಗಿದೆ. ಇದರಿಂದ ಸ್ಥಳೀಯರ ಸಂಚಾರ ಸುಗಮವಾಗಿತ್ತು. ಆದರೆ ಕಳೆದ ಕೆಲವು ತಿಂಗಳಿಂದ ರಸ್ತೆಯ ಅಲ್ಲಲ್ಲಿ ಇಂಟರ್ ಲಾಕ್ ಸಡಿಲಗೊಂಡ ಕಾರಣ ವಾಹನಗಳು ಸಂಚರಿಸುವಾಗ ಅಪಘಾತ ಭೀತಿ ಉಂಟಾಗುತ್ತಿದೆ. ಸವಾರರು ಆತಂಕಗೊಂಡಿದ್ದಾರೆ. ಪ್ರತಾಪನಗರ ದಿಂದ ತಿಂಬರ, ಕುಬಣೂರು, ಪಚ್ಚಂಬಳ ಸಹಿತ ವಿವಿಧ ಕಡೆಗಳಿಗೆ ಸ್ಥಳೀಯರು ಈ ರಸ್ತೆಯನ್ನೇ ಉಪ ಯೋಗಿಸುತ್ತಿದ್ದಾರೆ. ಸಂಬಂಧಪಟ ಅಧಿಕಾರಿ ಗಳು ಈ ರಸ್ತೆಯನ್ನು ದುರಸ್ತಿ ಗೊಳಿಸಿ ಸುಗಮ ಸಂಚಾರಕ್ಕೆ ಕ್ರಮಕೈಗೊಳ್ಳಬೇಕೆಂದು ಊರವರು ಆಗ್ರಹಿಸಿದ್ದಾರೆ.
