ಕೊಚ್ಚಿ ಬಂದರಿಗೆ ಬಂದ ಹಡಗಿನಲ್ಲಿ ‘ಐ ಲವ್ ಯೂ ಪಾಕಿಸ್ತಾನ್’ ಬರಹ ಪತ್ತೆ: ಸಮಗ್ರ ತನಿಖೆ ಆರಂಭ

ಕೊಚ್ಚಿ: ಕೊಚ್ಚಿ ಶಿಪ್ ಯಾರ್ಡ್‌ಗೆ ದುರಸ್ತಿ ಕೆಲಸಕ್ಕಾಗಿ ಬಂದ ಸರಕು ಹಡಗಿನಲ್ಲಿ ಐ ಲವ್ ಯೂ ಪಾಕಿಸ್ತಾನ್ ಎಂಬ ಬರಹ ಪತ್ತೆಯಾಗಿದ್ದು, ಆ ಬಗ್ಗೆ ಕೊಚ್ಚಿ ಸಿಟಿ ಪೊಲೀಸರು ಮತ್ತು ಕೇಂದ್ರ ಗುಪ್ತಚರ ವಿಭಾಗ ಸಮಗ್ರ ತನಿಖೆ ಆರಂಭಿಸಿದೆ. ಈ ಹಡಗಿನ ಕುರಿತಾದ ಪೂರ್ಣ ಮಾಹಿತಿ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಸಂಗ್ರಹಿಸಿ ಇನ್ನೊಂದೆಡೆ ಸಮಾನಾಂತರ ತನಿಖೆ ನಡೆಸುತ್ತಿದ್ದಾರ.

ಈ ಹಡಗಿನ ಖಾಯಂ ಹಾಗೂ ತಾತ್ಕಾಲಿಕ ಸಿಬ್ಬಂದಿಗಳು, ಅದರ ಗುತ್ತಿಗೆದಾರರು ಹಾಗೂ ಹಡಗು ಸಂಸ್ಥೆಯ ಮಾಲಕರ ಹೇಳಿಕೆಗಳನ್ನು ಪೊಲೀಸರು ಮತ್ತು ಕೇಂದ್ರ ಗುಪ್ತಚರ ವಿಭಾಗ ಪ್ರತ್ಯೇಕ ಪ್ರತ್ಯೇಕವಾಗಿ ದಾಖಲಿಸತೊಡಗಿದೆ. ಕೇಂದ್ರ ಗುಪ್ತಚರ  ವಿಭಾಗ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಹಡಗು ಎರಡು ವಾರ ಹಿಂದೆ ಸಮುದ್ರದಲ್ಲಿ ಪ್ರತ್ಯಕ್ಷಗೊಂಡಿತ್ತು. ಇದರಲ್ಲಿ ನೂರಾರು ಮಂದಿ ದುಡಿಯುತ್ತಿದ್ದಾರೆ. ಹಡಗನ್ನು ನಂತರ ದುರಸ್ತಿ ಕೆಲಸದ ಹೆಸರಲ್ಲಿ ಕೊಚ್ಚಿ ಶಿಪ್ ಯಾರ್ಡ್‌ಗೆ ಸಾಗಿಸಲಾಗಿತ್ತು. ಅದ ಶಿಪ್ ಯಾರ್ಡ್‌ಗೆ ತಲುಪಿದಾಕ್ಷಣ ಅದರ ಸಿಬ್ಬಂದಿಗಳ ಪೈಕಿ ಕೆಲವರು ದಿಢೀರ್ ಅಪ್ರತ್ಯಕ್ಷವಾಗಿದ್ದಾರೆ. ಅವರ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸತೊಡಗಿದ್ದಾರೆ.

ಕೊಚ್ಚಿನ ಶಿಪ್ ಯಾರ್ಡ್‌ನಲ್ಲಿ ಭಾರತೀಯ ನೌಕಾಪಡೆಯ ಹಡಗುಗಳು ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಹಡಗುಗಳು ದುರಸ್ತಿ ಕೆಲಸಗಳಿಗಾಗಿ ಈಗ ಬಂದು ಸೇರಿದೆ. ಈ ಪೈಕಿ ಒಂದು ಹಡಗಿನಲ್ಲಿ ಪಾಕಿಸ್ತಾನ್ ಪರ ಬರಹ ಗೋಚರಿಸಿದೆ.  2019ರಲ್ಲಿ ಐಎಸೆಸ್ ವಿಕ್ರಾಂತ್ ನೌಕೆ ಇದೇ ಶಿಪ್ ಯಾರ್ಡ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ವೇಳೆ ಅದರ ಹಾರ್ಡ್ ಡಿಸ್ಕ್ ಕಳವುಹೋಗಿತ್ತು. ಅಂದು ಆ ಬಗ್ಗೆ ನಡೆಸಲಾದ ತನಿಖೆಗೆ ಸಮಾನಾಂತರ ರೀತಿಯ ತನಿಖೆಯನ್ನು ಈಗ ನಡೆಸಲಾಗುತ್ತಿದೆ.

RELATED NEWS

You cannot copy contents of this page