ಬದಿಯಡ್ಕ: ವಾಣಿಯಗಾಣಿಗ ಸಭಾ ಜಿಲ್ಲಾ ಕಾರ್ಯದರ್ಶಿ, ಗಾಯಕ ರತ್ನಾಕರ ಓಡಂಗಲ್ಲು ಇವರ ತಾಯಿ ತೇಯಮ್ಮ (76) ನಿಧನ ಹೊಂದಿದರು. ವಿದ್ಯಾಗಿರಿ ಬಳಿಯ ಓಡಂಗಲ್ಲು ನಿವಾಸಿಯಾಗಿದ್ದಾರೆ. ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರು ನಿನ್ನೆ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಇವರ ಪತಿ ರಾಮ ಪಾಟಾಳಿ ಈ ಹಿಂದೆಯೇ ನಿಧನ ಹೊಂದಿದ್ದಾರೆ.
ಮೃತರು ಪುತ್ರ ರತ್ನಾಕರ ಓಡಂಗಲ್ಲು, ಪುತ್ರಿ ಶಾರದಾ, ಅಳಿಯ ದಯಾನಂದ, ಸೊಸೆ ಕವಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಪುತ್ರಿ ಸಾವಿತ್ರಿ ಈ ಹಿಂದೆ ನಿಧನ ಹೊಂ ದಿದ್ದಾರೆ. ನಿಧನಕ್ಕೆ ಜಿಲ್ಲಾ ವಾಣಿಯ ಗಾಣಿಗ ಸಭಾ ಸಂತಾಪ ಸೂಚಿಸಿದೆ.






