ಬದಿಯಡ್ಕ: ಫೇಸ್ ಬುಕ್ ಮೂಲಕ ಸಂಪರ್ಕಿಸಿ ಉದ್ಯೋ ಗ ನೀಡುವುದಾಗಿ ತಿಳಿಸಿ ಸೀತಾಂ ಗೋಳಿ ನಿವಾಸಿ ಯೋರ್ವನ ಬ್ಯಾಂಕ್ ಖಾತೆ ಗಳಿಂದ 1,12,300 ರೂ. ವಂಚಿಸಿದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ.
ಬೇಳ ಸೀತಾಂಗೋಳಿ ಪೀಲಿಪಳ್ಳ ಹೌಸ್‌ನ ರಶಾದ್ ಎ.ಕೆ ಈ ಬಗ್ಗೆ ದೂರು ನೀಡಿದ್ದು ಅದರಂತೆ ಅಪರಿಚಿತ ವ್ಯಕ್ತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
2025 ಜೂನ್ 1ರಿಂದ ಜುಲೈ 12ರ ಮಧ್ಯೆ ಉದ್ಯೋಗ ಭರವಸೆ ನೀಡಿ ನನ್ನ ಎರಡು ಬ್ಯಾಂಕ್ ಖಾತೆಗಳಿಂದಾಗಿ ಮೂರು ಬಾರಿಯಾಗಿ ಹಣ ಪಡೆದು ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ರಶಾದ್ ಆರೋಪಿಸಿದ್ದಾರೆ.






