ಎಸ್.ಐ.ಆರ್: ಅಪರಿಮಿತ ಕೆಲಸದ ಹೊರೆ ಆರೋಪ: ಬಿಎಲ್‌ಒ ಆತ್ಮಹತ್ಯೆ ; ಕೆಲಸ ಬಹಿಷ್ಕರಿಸಿ ಬಿಎಲ್‌ಒಗಳಿಂದ ರಾಜ್ಯಾದ್ಯಂತ ಪ್ರತಿಭಟನೆ

ಕಾಸರಗೋಡು: ಮತಪಟ್ಟಿಯ  ತೀವ್ರ  ಪರಿಷ್ಕರಣೆಗೆ ಸಂಬಂಧಿಸಿದ  (ಎಸ್‌ಐಆರ್)ಗೆ ಸಂಬಧಿಸಿದ ಅಪರಿಮಿತ ಕೆಲಸದ ಹೊರೆಯಿಂದ ಮಾಸಿಕ ಒತ್ತಡದಲ್ಲಿ ಸಿಲುಕಿ ಪಯ್ಯನ್ನೂರಿನಲ್ಲಿ ಬೂತ್ ಲೆವೆಲ್ ಆಫೀಸರ್ (ಬಿಎಲ್‌ಒ) ಅನೀಶ್ ಜೋರ್ಜ್ (44) ಎಂಬವರು ಆತ್ಮಹತ್ಯೆಗೈಯ್ಯಲು ಕಾರಣವಾದ ಹಿನ್ನೆಲೆಯನ್ನು ಪ್ರತಿಭಟಿಸಿ ಆಡಳಿತ ಮತ್ತು ವಿರೋಧ ಪಕ್ಷ ಅನುಕೂಲಕರ  ಸರಕಾರಿ ಸಿಬ್ಬಂದಿಗಳ ಸಂಘಟನೆಗೊಳಪಟ್ಟ ಬಿಎಲ್‌ಒಗಳು ಇಂದು ತಮ್ಮ ಕೆಲಸವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಈ ಪ್ರತಿಭಟನೆ ನಡೆಸಲಾಗುತ್ತಿದೆ.

ವಾಮಪಕ್ಷಗಳ ಅನುಕೂಲಕರ ಸಂಘಟನೆಯಾದ ಆಕ್ಷನ್ ಕೌನ್ಸಿಲ್ ಆಫ್ ಸ್ಟೇಟ್ ಗವರ್ಮೆಂಟ್   ಎಂಪ್ಲೋಯೀಸ್ ಆಂಡ್ ಟೀಚರ್ಸ್, ಅಧ್ಯಾಪಕ ಸರ್ವೀಸ್ ಸಂಘಟನಾ ಹೋರಾಟ ಸಮಿತಿ ಮತ್ತು ಕಾಂಗ್ರೆಸ್ ಅನುಕೂಲಕರ ಸಂಘಟ ನೆಯಾದ ಎನ್‌ಜಿಒ ಅಸೋಸಿಯೇಶನ್ ನೇತೃತ್ವದಲ್ಲಿ ಬಿಎಲ್‌ಒಗಳು ಇಂದು ತಮ್ಮ ಕೆಲಸ ಬಹಿಷ್ಕರಿಸಿ ರಾಜ್ಯ ಚುನಾವಣಾ ಆಯೋಗ ಕಚೇರಿ ಮತ್ತು ಜಿಲ್ಲಾ ಚುನಾವಣಾ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿದರು.

ಆದರೆ ಬಿಎಲ್‌ಒಗಳು ಯಾವುದೇ ರೀತಿಯ ಅಪರಿಮಿತ ಕೆಲಸದ ಹೊರೆಯ ಒತ್ತಡಕ್ಕೆ ಒಳಗಾಗುವ ಅಗತ್ಯವಿಲ್ಲ. ಯಾಕೆಂದರೆ ಎಸ್‌ಐಆರ್ ಕ್ರಮ ಆರಂಭಗೊಂಡ ದಿನದಿಂದ ಮುಂದಿನ 31 ದಿನಗಳ ತನಕ ಡಿಎಲ್‌ಒಗಳನ್ನು ಇತರ ಕರ್ತವ್ಯಗಳಿಂದ ಪೂರ್ಣವಾಗಿ ಹೊರತುಪಡಿಸಲಾಗಿದೆ. ಅವರಿಗೆ ಅಗತ್ಯದ ಸಹಾಯ ಮೇಲಧಿಕಾರಿಗಳಿಂದಲೂ ಲಭಿಸುತ್ತಿದೆ. ಮಾನಸಿಕ ಒತ್ತಡದ ಬಗ್ಗೆ ಈತನಕ ಯಾರೂ ದೂರು ಹೇಳಿಲ್ಲ. ಬಿಎಲ್‌ಒ ಆತ್ಮಹತ್ಯೆಗೈದ ಬಗ್ಗೆ ಕಣ್ಣೂರು ಜಿಲ್ಲಾಧಿಕಾರಿಯವರಿಂದ ಈಗಾಗಲೇ ವರದಿ ಕೇಳಲಾಗಿದೆ. ಅದು  ಲಭಿಸಿದ ಬಳಿಕ ಈ ವಿಷಯದಲ್ಲಿ ಮುಂದಿನ  ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯ ಚುನಾವಣಾ ಆಯುಕ್ತ ರತನ್ ಯು ಖೇಲ್ಕರ್ ಹೇಳಿದ್ದಾರೆ.

ಬಿಎಲ್‌ಒ ಅನೀಶ್ ಜೋರ್ಜ್ ಆತ್ಮಹತ್ಯೆಗೆ ಸಿಪಿಎಂ ಶಕ್ತಿ ಕೇಂದ್ರಗಳಲ್ಲಿ ಅವರಿಗೆ ಉಂಟಾದ ಬೆದರಿಕೆಯೇ ಕಾರಣವಾಗಿದೆಯೆಂದು ಇದೇ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಆರೋಪಿಸಿದೆ. ಸಿಪಿಎಂ ಶಕ್ತಿ  ಕೇಂದ್ರಗಳಲ್ಲಿ ಅನೀಶ್ ಜೋರ್ಜ್ ಎಸ್‌ಐಆರ್‌ಗೆಂದು ಹೋದ ವೇಳೆ ಅಲ್ಲಿ ಅವರಿಗೆ  ಹಲವು ಮನೆಗಳಿಂದ ಬೆದರಿಕೆ ಉಂಟಾಗಿತ್ತೆಂದು ಬಿಜೆಪಿ ಮತ್ತು ಕಾಂಗ್ರೆಸ್ ಆರೋಪಿಸಿದೆ.

ನಿವೃತ್ತ ಅಧ್ಯಾಪಕ ಜೋರ್ಜ್- ಮೇರಿಕುಟ್ಟಿ ದಂಪತಿ ಪುತ್ರ ಪಯ್ಯನ್ನೂರು ಎಟ್ಟುಕುಡುಕ್ಕೆ ಖಾದಿ ಸೆಂಟರ್ ಸಮೀಪದ ತರಯಿಲ್ ವೀಟಿಲ್ ನಿವಾಸಿಯಾಗಿರುವ ಅನೀಶ್ ಜೋರ್ಜ್ ನಿನ್ನೆ ಬೆಳಿಗ್ಗೆ ಮನೆ ಕೊಠಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರು ಕಣ್ಣೂರು ಜಿಲ್ಲೆಯ ಕುನ್ನೂರು ಎಎಲ್‌ಪಿ ಶಾಲೆಯ ಆಫೀಸ್ ಅಡೆಂಟರ್ ಹಾಗೂ ಕಾಂಗೋಲ್-ಆಲಪಡಂಬು ಗ್ರಾಮ ಪಂಚಾಯತ್‌ನ 18ನೇ ಮತಗಟ್ಟೆಯ ಬಿಎಲ್‌ಒ ಆಗಿದ್ದಾರೆ.

RELATED NEWS

You cannot copy contents of this page