ಎಸ್‌ಐಆರ್: ಕೇರಳದ ಅರ್ಜಿ ಸುಪ್ರೀಂಕೋರ್ಟ್ ಪರಿಶೀಲನೆ ನಾಳೆ

ನವದೆಹಲಿ: ಕೇರಳದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕ್ರಮವನ್ನು ಮುಂದೂಡಬೇಕೆಂದು ಕೋರಿ ಕೇರಳ ಸರಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ನಾಳೆ ಪರಿಶೀಲಿಸಲಿದೆ. ಇದೇ ಸಂದರ್ಭದಲ್ಲಿ ಕೇರಳದಲ್ಲಿ ನಡೆಯುತ್ತಿರುವ ಎಸ್‌ಐಆರ್ ಕ್ರಮದ ಸಮಯವನ್ನು ಇನ್ನೊಂದೆಡೆ ಕೇಂದ್ರ ಚುನಾವಣಾ ಆಯೋಗ ಡಿ. 4ರ ಬದಲಾಗಿ ಡಿ.11ರ ತನಕ ವಿಸ್ತರಿಸಿದೆ. ಇದರಂತೆ ಕರಡು ಮತದಾರ ಯಾದಿಯನ್ನು ಪ್ರಕಟಿಸುವ ಸಮಯವನ್ನು ಆಯೋಗ ಡಿ. 9ರ ಬದಲು ಡಿ. 16ಕ್ಕೆ ಮುಂದೂಡಿದೆ. ಇದಕ್ಕೆ ಹೊಂದಿಕೊಂಡು  ಅಂತಿಮ ಮತದಾರ ಯಾದಿಯನ್ನು ಪ್ರಕಟಿಸುವ ದಿನಾಂಕವನ್ನು ಫೆಬ್ರವರಿ 7ರ ಬದಲು ಫೆಬ್ರವರಿ 14ಕ್ಕೆ ಮುಂದೂಡಲಾಗಿದೆ.

ಕೇರಳ ಒಳಗೊಂಡು 9 ರಾಜ್ಯಗಳ ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳ ಎಸ್‌ಐಆರ್ ಕ್ರಮದ ಸಮಯವನ್ನೂ ಆಯೋಗ ಒಂದು ವಾರಕ್ಕೆ ವಿಸ್ತರಿಸಿದೆ.

RELATED NEWS

You cannot copy contents of this page