ಬೆಳ್ತಂಗಡಿ: ಧರ್ಮಸ್ಥಳಕ್ಕೆ ಸಂಬಂಧಿಸಿ ನಡೆದ ಒಳಸಂಚಿನ ಬಗ್ಗೆ ನಿರ್ಣಾಯಕ ಪುರಾವೆಗಳು ಲಭಿಸಿವೆ ಎಂದು ಪ್ರತ್ಯೇಕ ತನಿಖಾ ತಂಡ ತಿಳಿಸಿದೆ. ಚಿನ್ನಯ್ಯ ಉಪಯೋಗಿಸಿರುವ ಸಹಿತ ಆರು ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ. ಒಳಸಂಚು ಸಾಬೀತುಪಡಿಸುವ ವೀಡಿಯೋಗಳು ಫೋನ್‌ನಲ್ಲಿ ಇದೆ ಎಂದು ಎಸ್‌ಐಟಿ ತಿಳಿಸುತ್ತಿದೆ.
ಇದೇ ವೇಳೆ ಚಿನ್ನಯ್ಯನನ್ನು ಮಹೇಶ್ ತಿಮರೋಡಿಯ ಮನೆಗೆ ತಲುಪಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಅಲ್ಲದೆ ಪುತ್ರಿ ನಾಪತ್ತೆಯಾಗಿದ್ದಾಳೆಂದು ತಿಳಿಸಿದ್ದ ಸುಜಾತಾ ಭಟ್‌ನ್ನು ಇಂದು ಮತ್ತೆ ತನಿಖೆಗೊಳಪಡಿಸಲು ಎಸ್‌ಐಟಿ ನಿರ್ಧರಿಸಿದೆ. ಚಿನ್ನಯ್ಯ ನೀಡಿದ ಹೇಳಿಕೆಯಲ್ಲಿ ಕಂಡುಬಂದ ಸಂಶಯವೇ ಆರೋಪ ಸುಳ್ಳಾಗಿದೆ ಯೆಂದು ಸಾಬೀತುಗೊಳ್ಳಲು ಸಹಾಯಕವಾಗಿದೆ.