ಬಸ್ ತಡೆದು ನಿಲ್ಲಿಸಿ ಚಾಲಕನಿಗೆ ಹಲ್ಲೆ: ಆರು ಮಂದಿ ವಿರುದ್ಧ ಕೇಸು 

ಕಾಸರಗೋಡು:  ರೈಲ್ವೇ ನಿಲ್ದಾಣ ಸಮೀಪ ಖಾಸಗಿ ಬಸ್ ತಡೆದು ನಿಲ್ಲಿಸಿ ಚಾಲಕನಿಗೆ ಹಲ್ಲೆಗೈದ ಘಟನೆಗೆ ಸಂಬಂಧಿಸಿ ಕಂಡರೆ ಪತ್ತೆಹಚ್ಚಬಹು ದಾದ ಆರು ಮಂದಿ ವಿರುದ್ಧ ಕಾಸರ ಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚೆರ್ಕಳ ನಿವಾಸಿಯೂ ಶಾನು ಬಸ್‌ನ ಚಾಲಕನಾದ ಮುಹಮ್ಮದ್ ಶಿಹಾಬ್ (26)ರ ಮೇಲೆ ತಂಡ ಹಲ್ಲೆಗೈದಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆ ವೇಳೆ ಘಟನೆ ನಡೆದಿದೆ. ರೈಲ್ವೇ ನಿಲ್ದಾಣ ಸಮೀಪಕ್ಕೆ ಬಸ್ ತಲುಪಿದಾಗ  ಆಟೋ ನಿಲ್ದಾಣದ ಸಮೀಪದಲ್ಲಿದ್ದ  ತಂಡವೊಂದು ಬಸ್‌ಗೆ ಹತ್ತಿ ಹಲ್ಲೆಗೈದಿರುವುದಾಗಿ ಶಿಹಾಬ್ ಆರೋಪಿಸಿದ್ದಾರೆ.  ಬಸ್ ಸಮಯಕ್ಕೆ ಸಂಬಂಧಿಸಿದ ತರ್ಕ ವಾಗ್ವಾದಕ್ಕೆ ಕಾರಣವಾಗಿದೆಯೆಂದು ಹೇಳಲಾಗು ತ್ತಿದೆ. ಚಾಲಕ ಹಾಗೂ ನಿರ್ವಾಹ ಕರನ್ನು ಅಸಭ್ಯವಾಗಿ ನಿಂದಿಸಿದ ತಂಡ ಬಳಿಕ ಹಲ್ಲೆಗೈದಿದೆ. ಮುಖಕ್ಕೆ, ಬೆನ್ನಿಗೆ ಹಲ್ಲೆಗೈದು, ಹೊಟ್ಟೆಗೆ ತುಳಿದು ಗಾಯಗೊಳಿಸಿರುವುದಾಗಿ ಶಿಹಾಬ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಗಾಯಗೊಂಡ ಶಿಹಾಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

RELATED NEWS

You cannot copy contents of this page