ಎಸ್‌ಕೆಎಸ್‌ಎಸ್‌ಎಫ್ ಧಾರ್ಮಿಕ ಪ್ರವಚನ 8ರಂದು

ಕುಂಬಳೆ: ಎಸ್‌ಕೆಎಸ್‌ಎಸ್‌ಎಫ್ ಅಡ್ಕ ಘಟಕದ ನೇತೃತ್ವದಲ್ಲಿ ಏಕದಿನ ಧಾರ್ಮಿಕ ಪ್ರವಚನ ಈ ತಿಂಗಳ 8ರಂದು ನಡೆಯಲಿದೆಯೆಂದು ಕುಂಬಳೆ ಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ. ಅಂದು ರಾತ್ರಿ 7ಕ್ಕೆ ಕೆ.ಎಸ್. ಮೊಹಮ್ಮದ್ ಶಮೀಮ್ ತಂಙಳ್ ಕುಂಬೋಳ್ ಉದ್ಘಾಟಿಸುವರು. ಸಿಂಸಾರುಲ್ ಹಕ್ ಹುದವಿ ಪ್ರಧಾನ ಭಾಷಣ ಮಾಡುವರು.  ಈ ಬಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಯೂಸಫ್ ಸಿ.ಎ., ಒ.ಕೆ. ಇಬ್ರಾಹಿಂ, ಫೈಸಲ್ ದಾರಿಮಿ, ಅಬ್ದುಲ್ ರಹ್‌ಮಾನ್ ಹಾಜಿ ಬಂಡಸಾಲೆ, ಮುಹಮ್ಮದ್ ಮುಟ್ಟಂ, ಮೊದೀನ್ ಭಾಗವಹಿಸಿದರು.

RELATED NEWS

You cannot copy contents of this page