ಕಾಸರಗೋಡು: ಕಾಲಿನ ಬೆರಳು ಗಳಲ್ಲಿ ನಿಂತು ವಿಶ್ವ ದಾಖಲೆ ಮಾಡಿದ ಕೂಡ್ಲು ಶಾಖೆ ಕುಟುಂಬ ಸದಸ್ಯರಾದ ಅಜಿತ್ ಕುಮಾರ್-ಜಯಶ್ರೀ ದಂ ಪತಿ ಪುತ್ರಿಯಾದ ಆಶಿತಾಳನ್ನು ಎಸ್‌ಎನ್‌ಡಿಪಿ ಕಾಸರಗೋಡು ಯೂನಿ ಯನ್ ಪದಾಧಿಕಾರಿಗಳು ಮನೆಗೆ ತಲುಪಿ ಗೌರವಿಸಿದರು. ಐಎಸ್‌ಒ ಸರ್ಟಿಫೈಡ್ ಆರ್ಗನೈಸೇಶನ್ ಆದ ಕಲಾಂ ಎಂಬ ಸಂಘಟನೆ ಈ ಕ್ರೀಡಾ ವಿನೋದ ದಲ್ಲಿ ವಿಶ್ವ ದಾಖಲೆ ಗಳಿಸಿದೆ. ಮಧೂರು ಪಂ. ಅಧ್ಯಕ್ಷ ಕೆ. ಗೋಪಾ ಲಕೃಷ್ಣ ಕೂಡ್ಲು, ಎಸ್‌ಎನ್‌ಡಿಪಿ ಕಾಸರಗೋಡು ಯೂನಿಂiiನ್ ಕಾರ್ಯದರ್ಶಿ ನಾಗೇಶ್ ಪಾರೆಕಟ್ಟೆ ಜಂಟಿಯಾಗಿ ಗೌರವಿಸಿದರು.ಕೂಡ್ಲು ಶಾಖೆ ಅಧ್ಯಕ್ಷ ಕೃಷ್ಣನ್ ಪಾರೆಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಹಲವು ಮಂದಿ ಉಪಸ್ಥಿತರಿದ್ದರು.
