ಜಿಲ್ಲಾ ಪಂ.ನ ಪುತ್ತಿಗೆ ಡಿವಿಶನ್‌ನಲ್ಲಿ ಸೋಮಶೇಖರರ ಗೆಲುವು:ಯುಡಿಎಫ್ ಪಾಳಯದಲ್ಲಿ ನವೋತ್ಸಾಹ

ಪೆರ್ಲ: ಜಿಲ್ಲಾ ಪಂಚಾಯತ್‌ನ  ಪುತ್ತಿಗೆ ಡಿವಿಶನ್‌ನಲ್ಲಿ ಯುಡಿಎಫ್‌ನಸೋಮಶೇಖರ ಜೆ.ಎಸ್. ಅವರು ಗೆಲುವು ಸಾಧಿಸಿರುವುದು ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್‌ನಲ್ಲಿ ಹೊಸ ಹುರುಪು ಮೂಡಿಸಿದೆ. ಕಳೆದ ಚುನಾವಣೆಯಲ್ಲಿ ೬೦೦೦ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ೩ನೇ ಸ್ಥಾನದಲ್ಲಿದ್ದ ಯುಡಿಎಫ್ ಅಭ್ಯರ್ಥಿ ಇದೀಗ ಮೊದಲ ಸ್ಥಾನಕ್ಕೆ ತಲುಪಿರುವುದು ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಗೆಲುವು ಯುಡಿಎಫ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಎಣ್ಮಕಜೆ ಪಂಚಾಯತ್ ಅಧ್ಯಕ್ಷರಾಗಿ 10 ವರ್ಷದ ಅನುಭವ, ಶಿಕ್ಷಣ,  ಸಹಕಾರಿ ಕ್ಷೇತ್ರದಲ್ಲಿ ಸೇವೆ ಹಾಗೂ ನಿಷ್ಕಳಂಕ ವ್ಯಕ್ತಿತ್ವ ಸೋಮಶೇಖರರ ಗೆಲುವಿಗೆ ಪ್ರಮುಖ ಕಾರಣಗಳಾಗಿವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ. ಈ ಡಿವಿಶನ್‌ನಲ್ಲಿ ಸಿಪಿಎಂನ ಮೊಹಮ್ಮದ್ ಹನೀಫ್, ಬಿಜೆಪಿಯ ಮಣಿಕಂಠ ರೈ ಹಾಗೂ ಯುಡಿಎಫ್‌ನ ಸೋಮಶೇಖರರ ನಡುವೆ ತ್ರಿಕೋನ ಸ್ಪರ್ಧೆ ನಡೆದಿತ್ತು.  ಸೋಮಶೇಖರ ಜೆ.ಎಸ್.ರಿಗೆ 15,677 ಮತಗಳು ಲಭಿಸಿದೆ. ಸಮೀಪದ ಪ್ರತಿಸ್ಪರ್ಧಿ ಮಣಿಕಂಠ ರೈಯವರಿಗೆ 15,259 ಮತಗಳು ಲಭಿಸಿದೆ.

RELATED NEWS

You cannot copy contents of this page