ಕಾಸರಗೋಡು: ಗೃಹಿಣಿಯನ್ನು ಇರಿದು ಕೊಲೆಗೈಯ್ಯಲೆತ್ನಿಸಿದ್ದು, ಈ ವೇಳೆ ಪುತ್ರಿಯೂ ಇರಿತದಿಂದ ಗಾಯ ಗೊಂಡಿದ್ದಾಳೆ. ಘಟನೆಯ ಬಳಿಕ ಬೇಕಲ ಪೊಲೀಸ್ ಠಾಣೆಯಲ್ಲಿ ಶರಣಾದ ಆರೋಪಿಗೆ ಹೃದಯಾಘಾತವುಂ ಟಾಗಿದ್ದು, ಈ ಹಿನ್ನೆಲೆಯಲ್ಲಿ ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಪಳ್ಳಿಕೆರೆ ಪಾಕಂ ಚೇರ್ಕಪ್ಪಾರ ಎಂಬಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ. ಚೇರ್ಕಪ್ಪಾರ ಮಞಂಗಾಡ್ ಅರ್ಚನ ನಿವಾಸ್‌ನ ಕೆ.ಎ. ಯಶೋಧ (67), ಪುತ್ರಿ ಶೈಜಿ ಮೋಳ್ (30) ಎಂಬಿವರು ಇರಿತದಿಂದ ಗಾಯಗೊಂಡಿದ್ದಾರೆ. ಇವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿ ಸಲಾಗಿದೆ. ಘಟನೆಯ ಬಳಿಕ ಯಶೋದರ ಪತಿಯೂ ಪಳ್ಳಿಕ್ಕೆರೆಯಲ್ಲಿ ಆಟೋ ಚಾಲಕನಾಗಿರುವ ಮಞಂಗಾಡ್‌ನ ಟಿ.ವಿ. ನಾಗರಾಜನ್ (73) ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದ ವೇಳೆ ನಾಗರಾಜನ್‌ಗೆ ಎದೆನೋವು ಕಾಣಿಸಿ ಕೊಂಡಿದ್ದು ಇದರಿಂದ ಜಿಲ್ಲಾ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ನೀಡಲಾಯಿತು. ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದುದರಿಂದ ಆರೋಪಿಯ ಬಂಧನ ದಾಖಲಿಸಲಾಯಿತು. ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಆರೋಪಿಗೆ ಎರಡು ವಾರಗಳ ರಿಮಾಂಡ್ ವಿಧಿಸಲಾಗಿದೆ.ಕೌಟುಂಬಿಕ ಸಮಸ್ಯೆಯ ಕಾರಣದಿಂದ ನಾಗರಾಜನ್ ಏಕಾಂಗಿಯಾಗಿಯೂ, ಪತ್ನಿ ಯಶೋದ ಹೆಣ್ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಈ ಹಿಂದೆಯೂ ಯಶೋದರ ಮೇಲೆ ನಾಗರಾಜನ್ ಹಲ್ಲೆ ನಡೆಸಿದ್ದನೆನ್ನಲಾಗಿದೆ. ಆ ಬಗ್ಗೆ ಪೊಲೀಸರಿಗೆ ದೂರು ನೀಡಿದ ದ್ವೇಷದಿಂದ ನಿನ್ನೆ ಮಧ್ಯಾಹ್ನ ನಾಗರಾಜನ್ ಯಶೋದರಿಗೆ ಇರಿದಿದ್ದು, ತಡೆಯಲೆತ್ನಿಸಿದಾಗ ಪುತ್ರಿಗೂ ಇರಿದು ಗಾಯಗೊಳಿಸಿ ರುವುದಾಗಿ ದೂರಲಾಗಿದೆ.







