ತಾಯಿಗೆ ಖರ್ಚಿಗೆ ಹಣ ನೀಡದ ಮಗನ ಸೆರೆ, ಜೈಲು

ಕಾಸರಗೋಡು: ತಾಯಿಗೆ ಖರ್ಚಿಗೆ ಹಣ ನೀಡದ ಹೆಸರಲ್ಲಿ ಆರ್‌ಡಿಒ ನ್ಯಾಯಾಲಯ ಹೊರಡಿಸಿದ ವಾರಂಟಿನನ್ವಯ ಮಗನನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಮಡಿಕೈ ಮಲಪ್ಪಚ್ಚೇರಿ ವಡುತ್ತಲ ಕುಳಿಯಿಲ್ ಪ್ರತೀಶ್ (46) ಎಂಬವರನ್ನು ಈ ರೀತಿ ಬಂಧಿಸಲಾಗಿದೆ.  ಮಗ ತನಗೆ ಖರ್ಚಿಗೆ ಹಣ ನೀಡುವುದಿಲ್ಲವೆಂದು ದೂರಿ ಪ್ರತೀಶ್‌ನ ತಾಯಿ ಎಲಿಯಮ್ಮ ಜೋಸೆಫ್ (68) ಹೊಸದುರ್ಗ ಸಬ್ ಡಿವಿಶನಲ್ ಮೆಜಿಸ್ಟ್ರೇಟ್ (ಆರ್‌ಡಿಒ) ನ್ಯಾಯಾಲಯಕ್ಕೆ ಈ ಹಿಂದೆ ದೂರು ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ನ್ಯಾಯಾಲಯ ಹೆತ್ತವರು ಮತ್ತು ಹಿರಿಯನಾಗರಿಕರಿಗೆ ಕಾನೂನು ಸಂರಕ್ಷಣಾ ನಿಯಮದ ಪ್ರಕಾರ ತಾಯಿಗೆ ತಿಂಗಳಿಗೆ ತಲಾ 2000 ರೂ.ನಂತೆ ಖರ್ಚಿಗೆ ನೀಡುವಂತೆ ಒಂದು ವರ್ಷದ ಹಿಂದೆ ಆದೇಶ ನೀಡಿತ್ತು. ಆದರೆ ನ್ಯಾಯಾಯದ ನಿರ್ದೇಶ ಪ್ರಕಾರ ಮಗ ತನಗೆ ಹಣ ನೀಡುವುದಿಲ್ಲವೆಂದು ಎಲಿಯಮ್ಮ ಜೋಸೆಫ್ ಐದು ತಿಂಗಳ ಹಿಂದೆ ಮತ್ತೆ ಆರ್‌ಡಿಒ ನ್ಯಾಯಾಲಯದ ಮೈಟೆನೆನ್ಸ್ ಟ್ರಿಬ್ಯೂನಲ್‌ಗೆ ದೂರು  ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಟ್ರಿಬ್ಯೂನಲ್ ಮುಂದಿನ 10 ದಿನಗಳೊಳಗೆ ಬಾಕಿ ಇರುವ ಎಲ್ಲಾ ಖರ್ಚಿನ ಹಣನ್ನು ನೀಡುವಂತೆ ನಿರ್ದೇಶಿಸಿ ಮಡಿಕೈ ಗ್ರಾಮಾಧಿಕಾರಿಯವರ ಮೂಲಕ ಪ್ರತೀಶ್‌ಗೆ ನೋಟೀಸು ಜ್ಯಾರಿಗೊಳಿಸಿತ್ತು. ಆದರೆ ತನಗೆ ಹಣ ನೀಡಲು ಸಾಧ್ಯವಾಗದ ಸ್ಥಿತಿ ಇದೆಯೆಂದು ಅದಕ್ಕೆ ಪ್ರತೀಶ್ ಬಳಿಕ ಟ್ರಿಬ್ಯೂನಲ್‌ನ ಮುಂದೆ ಹಾಜರಾಗಿ ತಿಳಿಸಿದ್ದನು. ಜುಲೈ 31ರೊಳಗೆ ಹಣ ನೀಡದಿದ್ದಲ್ಲಿ ಕ್ರಿಮಿನಲ್ ಕೇಸು ದಾಖಲಿಸಬೇಕಾಗಿ ಬರಲಿದೆಯೆಂದು ಟ್ರಿಬ್ಯೂನಲ್ ಆವೇಳೆ ಆತನಿಗೆ ಮುನ್ನೆಚ್ಚರಿಕೆ ನೀಡಿತ್ತು. ಅದರ ವಿಚಾರಣೆಯ ವೇಳಯಲ್ಲೂ ಹಣ ನೀಡಲು ಸಾಧವಾಗದೆಂದು ಆತ ಮತ್ತೆ ತಿಳಿಸಿದ್ದನು. ಅದರಿಂದಾಗಿ ಆರ್‌ಡಿಒ ನ್ಯಾಯಾಲಯ ಬಳಿಕ ಹೊರಡಿಸಿದ ವಾರೆಂಟಿನ್ವಯ ಪ್ರತೀಶ್‌ನನ್ನು ಬಂಧಿಸಿ ನಂತರ ಆತನನ್ನು ಜಿಲ್ಲಾ ಜೈಲಿಗೆ ಸಾಗಿಸಿ ಅಲ್ಲಿ ಕೂಡಿ ಹಾಕಲಾಯಿತು.

RELATED NEWS

You cannot copy contents of this page