ತಿರುವನಂತಪುರ: ಮದ್ಯಪಾನವನ್ನು ವಿರೋಧಿಸಿದ ತಾಯಿಯನ್ನು ಸ್ವಂತ ಪುತ್ರ ಕುತ್ತಿಗೆ ಇರಿದು ಕೊಲೆಗೈದ ಭೀಕರ ಘಟನೆ ತಿರುವನಂತಪುರದಲ್ಲಿ ನಡೆದಿದೆ. ಕಲ್ಲಿಯೂರು ಮನ್ನಂ ಮೆಮೋರಿಯಲ್ ರೋಡ್ ನಿವಾಸಿಯಾದ ವಿಜಯ ಕುಮಾರಿ (74) ಕೊಲೆಗೀಡಾದ ಗೃಹಿಣಿಯಾಗಿದ್ದಾರೆ. ಈ ಸಂಬಂಧ ಇವರ ಪುತ್ರ ಅಜಯ ಕುಮಾರ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಿನ್ನೆ ರಾತ್ರಿ 11.45ರ ವೇಳೆ ಈ ಕೊಲೆ ಕೃತ್ಯ ನಡೆದಿದೆ. ಅಜಯ ಕುಮಾರ್ ಮದ್ಯ ಸೇವಿಸುತ್ತಿದ್ದಾಗ ಬಾಟ್ಲಿ ನೆಲಕ್ಕೆ ಬಿದ್ದು ಪುಡಿಯಾಗಿತ್ತು. ಇದನ್ನು ತಾಯಿ ಪ್ರಶ್ನಿಸಿದಾಗ ಬಾಟ್ಲಿಯ ಗಾಜಿನಿಂದ ಆಕೆಯ ಕುತ್ತಿಗೆಗೆ ಇರಿದು ಅಜಯ ಕುಮಾರ್ ಕೊಲೆಗೈದಿದ್ದಾನೆಂದು ಹೇಳಲಾಗುತ್ತಿದೆ. ಆರೋಪಿ ಅಜಯ ಕುಮಾರ್ ನಿವೃತ್ತ ಪೋಸ್ಟ್‌ಗಾರ್ಡ್ ನೌಕರನಾಗಿದ್ದಾನೆ. ಇಂದು ಆರೋಪಿಯನ್ನು ಸ್ಥಳಕ್ಕೆ ತಲುಪಿಸಿ ಪೊಲೀಸರು ಮಾಹಿತಿ ಸಂಗ್ರಹಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

 
								 
															





