ತಿರುವನಂತಪುರ: ಕೇರಳ ಸೇರಿದಂತೆ 9 ರಾಜ್ಯಗಳ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ನಿನ್ನೆ ಅರ್ಧರಾತ್ರಿಯಿಂ ದಲೇ ಚಾಲನೆ ನೀಡಲಾಗಿದೆ.
ಸದ್ಯ ಕೇರಳದಲ್ಲಿ ಮತದಾರ ಪಟ್ಟಿಯಲ್ಲಿ ಒಟ್ಟು 2.785 ಕೋಟಿ ಮತದಾರರಿದ್ದಾರೆ. ಕೊನೆಗೆ ಎಂಬಂತೆ ಕೇರಳದಲ್ಲಿ 2002ರಲ್ಲಿ ಎಸ್‌ಐಆರ್ ನಡೆದಿತ್ತು. ಆ ಬಳಿಕ ಈ ಪ್ರಕ್ರಿಯೆ ನಡೆಯುತ್ತಿರುವುದು ಇದು ಮೊದಲ ಬಾರಿಯಾಗಿದೆ.
ಕೇರಳದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣಾ ಅಧಿಸೂಚನೆ ಈ ತನಕ ಪ್ರಕಟಿಸದೇ ಇರುವ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಗಳೊಂದಿಗೆ ಮುಂದಕ್ಕೆ ಸಾಗುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಕೇರಳದ ಹೊರತಾಗಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಲ ಸೇರಿದಂತೆ 12 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಶುದ್ಧೀಕರಣ ಕಾರ್ಯ ಆರಂಭಗೊಂ ಡಿದೆ. ಈ ಪ್ರಕ್ರಿಯೆ ಇಂದಿನಿಂದ ಫೆಬ್ರವರಿ 7ರ ತನಕ ಮುಂದುವರಿ ಯಲಿದೆ. ಕೇರಳದ ಹೊರತಾಗಿ ತಮಿಳುನಾಡು, ಪಶ್ಚಿಮಬಂ ಗಾಲ, ಅಸ್ಸಾಂ, ಉತ್ತರಪ್ರದೇಶ, ಮದ್ಯಪ್ರ ದೇಶ, ಛತ್ತೀಸ್‌ಗಡ್, ರಾಜಸ್ಥಾನ, ಗುಜರಾತ್, ಗೋವಾ ಮತ್ತು ಪುದು ಶ್ಶೇರಿ ರಾಜ್ಯಗಳ ವಿದಾನಸಭೆಗಳಿಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಆದರೆ ಅಸ್ಸಾಂನಲ್ಲಿ ಈಗ ನಡೆಯುತ್ತಿರುವ ಪೌರತ್ವ ಪರಿಶೀಲನೆಯ ಮೇಲ್ವಿಚಾರಣೆ ಈಗ ಸುಪ್ರೀಂಕೋರ್ಟ್‌ನ ಪರಿಶೀಲನೆ ಯಲ್ಲಿರುವುದರಿಂದಾಗಿ ಪ್ರಥಮ ಹಂತದ ಎಸ್‌ಐಆರ್‌ನಿಂದ ಅಸ್ಸಾಂನ್ನು ಹೊರತುಪಡಿಸಲಾ ಗಿದೆಯೆಂದು ಆಯೋಗ ತಿಳಿಸಿದೆ. ಎಸ್ ಐಆರ್‌ನಂತೆ ನವಂಬರ್ ೪ರಿಂದ ಡಿಸೆಂಬರ್ 4ರ ತನಕ ಮನೆ ಮನೆ ಪರಿಷ್ಕರಣೆ ನಡೆಯಲಿದೆ. ನಂತರ ಕರಡು ಮತದಾರ ಪಟ್ಟಿಯನ್ನು ಡಿಸೆಂಬರ್ 9ರಂದು ಪ್ರಕಟಿಸಲಾಗು ವುದು. ಆ ಬಗ್ಗೆ ಆಕ್ಷೇಪಗಳು ಅಥವಾ ದೂರುಗಳಿದ್ದಲ್ಲಿ ಅದನ್ನು ಡಿಸೆಂಬರ್ 9ರಿಂದ ಮುಂದಿನ ವರ್ಷ ಜನವರಿ ೮ರೊಳಗಾಗಿ ಸಲ್ಲಿಸಬಹುದಾಗಿದೆ. ಅವುಗಳ ವಿಚಾರಣೆ ಮತ್ತು ಪರಿಶೀಲನೆ ಡಿ. 9ರಿಂದ ಜನವರಿ 31ರೊಳಗಾಗಿ ನಡೆಸಲಾಗುವುದು. ನಂತರ ಮುಂದಿನ ವರ್ಷ ಫೆಬ್ರವರಿ 7ರಂದು ಅಂತಿಮ ಮತದಾರ ಯಾದಿ ಪ್ರಕಟಿಸಲಾಗುವುದು.







