ಕಾಸರಗೋಡು: 73ನೇ ಅಖಿಲ ಭಾರತ ಸಹಕಾರಿ ವಾರಾಚರಣೆಯ ರಾಜ್ಯ ಮಟ್ಟದ ಸಮಾರೋಪ ನವಂಬರ್ 2೦ರಂದು ಕಾಞಂಗಾಡ್‌ನಲ್ಲಿ ನಡೆಯಲಿದೆ. ಇದರ ಪ್ರಚಾರಾರ್ಥ ಕಾರ್ಯಕ್ರಮಗಳು ಇಂದು ಅಪರಾಹ್ನ 3 ಗಂಟೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಆರಂಭಗೊಳ್ಳಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ನಿತಿನ್‌ರಾಜ್ ಉದ್ಘಾಟಿಸುವರು.
ಕೇರಳ ರಾಜ್ಯೋತ್ಸವ ದಿನದಂದು ಜಿಲ್ಲೆಯ ಆಯ್ದ 73 ಸಹಕಾರಿ ಸಂಘಗಳ ಪರಿಸರದಲ್ಲ ನೆನಪಿನ ಗಿಡಗಳನ್ನು ನೆಡಲಾಗುವುದು. ಇದರ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಹೊಸದುರ್ಗ ಸಹಕಾರಿ ಬ್ಯಾಂಕ್ ಪರಿಸರದಲ್ಲಿ ಮಾರ್ಕೆಟ್ ಫೆಡ್ ಚೆಯರ್‌ಮೆನ್ ನ್ಯಾಯವಾದಿ ಸೋನಿ ಸೆಬಾಸ್ಟಿಯನ್ ಮಾವಿನ ಗಿಡ ನೆಡುವ ಮೂಲಕ ನೆರೇರಿಸುವರು. ಈ ವೇಳೆ ಆಯ್ದ ಸಹಕಾರಿ ಸಂಘಗಳಿಗೆ ಮಾವಿನಗಿಡ ಗಳನ್ನು ಹಸ್ತಾಂತರಿಸಲಾಗುವುದು.
ನವಂಬರ್ 7ರಂದು ಕುಂಬಳೆಯಿಂದ ಸಹಕಾರಿ ಪತಾಕೆಯೊಂದಿಗೆ 73 ಬೈಕ್‌ಗಳು ಭಾಗವಹಿಸುವ ರ‍್ಯಾಲಿ ನಡೆಯಲಿದೆ. ಅಂದು ಬೆಳಿಗ್ಗೆ ಕುಂಬಳೆ ಸಹಕಾರಿ ಬ್ಯಾಂಕ್ ಪರಿಸರದಲ್ಲಿ ಶಾಸಕ ಎಕೆಎಂ ಅಶ್ರಫ್ ಧ್ವಜ ಹಾರಿಸಿ ಉದ್ಘಾಟಿಸುವರು. ರ‍್ಯಾಲಿ ಕಾಞಂಗಾಡ್‌ನಲ್ಲಿ ಸಮಾಪ್ತಿಗೊಳ್ಳಲಿದೆ. ಕಾಞಂಗಾಡ್‌ನಿಂದ ಅಂದು ಮಧ್ಯಾಹ್ನ 2.30ಕ್ಕೆ ಹೊರಡುವ ಬೈಕ್ ರ‍್ಯಾಲಿಯನ್ನು ಕಾಞಂಗಾಡ್ ನಗರದಲ್ಲಿ ಚೆಯರ್‌ಮೆನ್ ವಿ.ವಿ. ರಮೇಶನ್ ಧ್ವಜ ಹಾರಿಸಿ ಉದ್ಘಾಟಿಸುವರು. ಈ ರ‍್ಯಾಲಿ ಸಂಜೆ 4ಕ್ಕೆ ತೃಕ್ಕರಿಪುರದಲ್ಲಿ ಸಮಾಪ್ತಿಗೊಳ್ಳಲಿದೆ. ಸಮಾರೋಪ ಕಾರ್ಯಕ್ರಮವನ್ನು ಶಾಸಕ ಸಂದೀಪ್ ವಾರ್ಯರ್ ಉದ್ಘಾಟಿಸುವರು.
13ರಂದು ನೀಲೇಶ್ವರ ಎಚ್.ಡಿ.ಸಿ ಕಾಲೇಜಿನ ವಿದ್ಯಾರ್ಥಿಗಳ ನೇತೃತ್ವದಲ್ಲಿ ಫ್ಲಾಶ್ ಮೋಬ್ ನಡೆಯಲಿದ್ದು, ಇದನ್ನು ಅಂದು ಬೆಳಿಗ್ಗೆ 1೦ಕ್ಕೆ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಎಬ್ರಹಾಂ ಉದ್ಘಾಟಿಸುವರು. ಕಾಞಂಗಾಡ್, ನೀಲೇಶ್ವರ, ಪರಪ್ಪ, ಚೆರ್ವತ್ತೂರು, ತೃಕ್ಕರಿಪುರ ಎಂಬಿಡೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
19ರಂದು ಕಾಞಂಗಾಡ್‌ನಲ್ಲಿ ಡಂಗುರ ಜಾಥಾ ನಡೆಯಲಿದ್ದು ಶಾಸಕ ಗೋವಿಂದನ್ ಪಳ್ಳಿಕ್ಕಾಪಿಲ್ ಉದ್ಘಾಟಿಸುವರು. ಕಾರ್ಯಕ್ರಮ ವಿವರಿಸಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಸರ್ಕಲ್ ಸಹಕಾರಿ ಯೂನಿಯನ್ ಚೆಯರ್‌ಮೆನ್ ಕೆ.ಆರ್. ಜಯಾನಂದ, ಸಹಕಾರಿ ಸಂಘ ಜೋಯಿಂಟ್ ರಿಜಿಸ್ಟ್ರಾರ್ ಕೆ.ವಿ.ಸತೀಶ್ಚಂದ್ರನ್, ಅಸಿಸ್ಟೆಂಟ್ ರಿಜಿಸ್ಟ್ರಾರ್ ಸಿ.ಸುನಿಲ್ ಕುಮಾರ್, ಪಿ.ವಿ. ರಾಜೇಶ್, ಅಸಿ. ರಿಜಿಸ್ಟ್ರಾರ್‌ಗಳಾದ ಸಿ. ವಿನೋದ್ ಕುಮಾರ್, ಕೆ. ರಾಜೀವನ್, ಪಬ್ಲಿಸಿಟಿ ಆಂಡ್ ಮೀಡಿಯಾ ಕಮಿಟಿ ಟೆಯರ್‌ಮೆನ್ ಪಿ.ಕೆ. ವಿನೋದ್ ಕುಮಾರ್ ಭಾಗವಹಿಸಿದರು.





