ಜ್ಯೂನಿಯರ್ ನ್ಯಾಯವಾದಿಗಳಿಗೆ ಸ್ಟೈಫಂಡ್ ಕೂಡಲೇ ನೀಡಬೇಕು- ಅಭಿಭಾಷಕ ಪರಿಷತ್

ಕಾಸರಗೋಡು: ಜ್ಯೂನಿಯರ್ ನ್ಯಾಯವಾದಿಗಳಿಗೆ ಘೋಷಿಸಿದ 5000 ರೂ. ಪ್ರತೀ ತಿಂಗಳ ಸ್ಟೈಫಂಡ್ ಕೂಡಲೇ ನೀಡಲು ಆರಂಭಿಸಬೇಕೆಂದು ಭಾರತೀಯ ಅಭಿಭಾಷಕ ಪರಿಷತ್ ಜಿಲ್ಲಾ ಸಮ್ಮೇಳನ ಠರಾವಿನಲ್ಲಿ ಆಗ್ರಹಿಸಿದೆ. ವಕಾಲತ್‌ಗಳಿಗೆ ೨೫ ರೂ.ಗಳ ಸ್ಟೈಫಂಡ್ ಸ್ಟಾಂಪ್ ಕಡ್ಡಾಯಗೊಳಿಸಿ, ವೆಲ್ಫೇರ್ ಫಂಡ್ ಸ್ಟಾಂಪ್ ೨೫ ರೂ.ನಿಂದ 100 ರೂ. ಆಗಿ ಹೆಚ್ಚಿಸಿ ನ್ಯಾಯವಾದಿಗಳ ಹೊರೆ ಹೆಚ್ಚಿಸಲಾಗಿದೆ. ಲೀಗಲ್ ಬೆನಿಫಿಟ್ ಫಂಡ್ ಸ್ಟಾಂಪ್ ರೂಪದಲ್ಲಿ ಲಭಿಸುವ ಬೃಹತ್ ಮೊತ್ತ ಸರಕಾರದ ಟ್ರಷರಿ ಅಕೌಂಟ್‌ಗೆ ಬಡ್ಡಿರಹಿತವಾಗಿ ಬದಲಿಸಲಾಗುತ್ತಿದೆ. ಪ್ರಸ್ತುತ ಮೊತ್ತಕ್ಕೆ ಸರಿಯಾದ ಬಡ್ಡಿ ನೀಡಲು ಸರಕಾರ ಸಿದ್ಧವಾಗಬೇಕು. ಅಲ್ಲದೆ ಆ ಮೊತ್ತದಿಂದ ಸ್ಟೈಫಂಡ್ ನೀಡಲು, ಅನ್ಯಾಯವಾದ ಶುಲ್ಕ ಹೆಚ್ಚಳ ಹಿಂತೆಗೆಯ ಬೇಕೆಂದು ಸಮ್ಮೇಳನದಲ್ಲಿ ಒತ್ತಾಯಿಸಲಾಯಿತು.

ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಸಂದೀಪ್ ಕುಮಾರ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದರು.  ನ್ಯಾಯವಾದಿಗಳಾದ ರಾಜ್ಯ ಉಪಾಧ್ಯಕ್ಷ ಬಿ. ರವೀಂದ್ರನ್, ಕರುಣಾಕರನ್ ನಂಬ್ಯಾರ್, ಪಿ. ಮುರಳೀಧರನ್, ಕುಸುಮ ಎಂ, ಅನಿಲ್ ಕೆ.ಜಿ, ಹರ್ಷಿತ, ಬೀನ ಕೆ.ಎಂ, ಗಿರೀಶ್ ರಾವ್ ಮಾತನಾಡಿದರು. ನ್ಯಾಯವಾದಿ ನವೀನ್‌ರಾಜ್ ಸ್ವಾಗತಿಸಿ, ನ್ಯಾಯವಾದಿ ಮಣಿಕಂಠನ್ ವಂದಿಸಿದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಎ.ಸಿ. ಅಶೋಕ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ನವೀನ್‌ರಾಜ್ ಕೆ.ಜೆ, ಕೋಶಾಧಿಕಾರಿ ಯಾಗಿ ಹರ್ಷಿತ, ಉಪಾಧ್ಯಕ್ಷರಾಗಿ ಅನಂತರಾಮ ಪಿ, ಅನಿಲ್ ಕೆ.ಜಿ, ಕುಸುಮ ಎಂ, ಕಾರ್ಯದರ್ಶಿಗಳಾಗಿ ಸಚ್ಚಿನ್ ಶೆಣೈ, ಪ್ರಜಿತ್ ಎಸ್.ಕೆ, ಅಕ್ಷತ ಮನೋಜ್ ಆಯ್ಕೆಯಾದರು.

RELATED NEWS

You cannot copy contents of this page