ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸ್ಥಳದಿಂದ ಕಬ್ಬಿಣದ ಸಾಮಗ್ರಿಗಳನ್ನು ಕದ್ದು ಸಾಗಿಸಿದ ತಂಡಕ್ಕೆ ಸೇರಿದ ಮೂವರನ್ನು ಮೇಲ್ಪರಂಬ ಪೊಲೀಸ್ ಠಾಣೆಯ ಎಸ್‌ಐ ಎ.ಎನ್. ಸುರೇಶ್ ಕುಮಾರ್ ನೇತೃತ್ವದ ಪೊಲೀ ಸರ ತಂಡ ಬಂಧಿಸಿದೆ. ಪೆರಿಯ ಚೆಕ್ಕಿ ಪಳ್ಳದ ಎಂ.ಮನ್ಸೂರ್(31), ಕುಣಿಯ ಪ್ಪಾರ ಹೌಸ್‌ನ ಮೊಹಮ್ಮದ್ ರಿಸಾದ್ (26) ಮತ್ತು ಕುಣಿಯ ಕುಂಡೂರ್ ಹೌಸ್‌ನ ಕೆ.ಎಚ್. ಅಲಿ ಅಸ್ಕರ್ (26) ಬಂಧಿತರಾದ ಆರೋಪಿಗಳು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಎರಡನೇ ರೀಚ್‌ಗೆ ಸೇರಿದ ಚೆಂಗಳ-ನೀಲೇಶ್ವರ ವಲಯದ ಪೊಯಿನಾಚಿ ಸೌತ್‌ನಿಂದ ಆರಂಭಗೊಂಡು ಮೈಲಾಟಿ ವಿದ್ಯುತ್ ಸಬ್ ಸ್ಟೇಶನ್ ತನಕ ಕಾಲುದಾರಿ ನಿರ್ಮಿಸಲು ತಂದಿರಿಸಲಾಗಿದ್ದ 4,74,720 ರೂ. ಮೌಲ್ಯದ ೪೬ ಕಬ್ಬಿಣದ ಸಾಮಗ್ರಿಗಳನ್ನು ಅಗೋಸ್ತ್ ೧೭ರಂದು ರಾತ್ರಿ ಕಳವುಗೈಯ್ಯಲಾಗಿತ್ತು. ಆ ಬಗ್ಗೆ ಕೊಳತ್ತೂರಿನ ನಂಜಿಯಿಲ್ ಇಂಜಿನಿಯರಿಂಗ್ ವರ್ಕ್ಸ್ ಸಂಸ್ಥೆಯ ಮೆನೇಜರ್ ಕೆ.ಕೆ. ಅನಿಲ್ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕದ್ದ ಸಾಮಗ್ರಿಗಳನ್ನು ಆರೋಪಿಗಳು ಪಿಕಪ್ ವಾಹನದಲ್ಲಿ ಸಾಗಿಸಿದ್ದರು. ಆ ಬಳಿಕ ಆರೋಪಿಗಳು ಮೊನ್ನೆ ಬೆಳಿಗ್ಗೆ ಪೊಯಿನಾಚಿ ಪೆಟ್ರೋಲ್ ಬಂಕ್ ಸಮೀಪದ ಸರ್ವೀಸ್ ರಸ್ತೆಯಿಂದಲೂ ಕಬ್ಬಿಣದ ಸರಳುಗಳನ್ನು ಸಾಗಿಸಲೆತ್ನಿಸಿ ದ್ದರು. ಅದನ್ನು ಕಂಡ ಅಲ್ಲಿನ ಸೈಟ್ ಸೂಪರ್‌ವೈಸರ್ ರಾಜಪ್ಪನ್ ಪಿಳ್ಳೆ ಹಾಗೂ ಊರವರು ಸೇರಿ ಆರೋಪಿಗಳನ್ನು ಅಲ್ಲೇ ತಡೆದು ನಿಲ್ಲಿಸಿ ನೀಡಲಾದ ಮಾಹಿತಿ ಯಂತೆ ಮೇಲ್ಪರಂಬ ಪೊಲೀಸರು ತಕ್ಷಣ ಅಲ್ಲಿಗೆ ಆಗಮಿಸಿ ಆರೋಪಿ ಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ನಂತರ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಅಗೋಸ್ತ್ 17ರಂದು ಕಬ್ಬಿಣದ ಸಾಮಗ್ರಿಗಳನ್ನು ಕದ್ದು ಸಾಗಿಸಿದ್ದು ಇವರೇ ಆಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಅದರಂತೆ ಅವರನ್ನು ಬಂಧಿಸಲಾಗಿದೆ.