ಪೆರ್ಲ ಪೇಟೆಯಲ್ಲಿ ಹಾಡಹಗಲೇ ಅಂಗಡಿಯಿಂದ 7 ಸಾವಿರ ರೂ. ಕಳವು

ಪೆರ್ಲ:  ಪೆರ್ಲ ಪೇಟೆಯಲ್ಲಿ ನಿನ್ನೆ ಹಾಡಹಗಲೇ  ಅಂಗಡಿಯೊಂದರಿಂದ ವ್ಯಕ್ತಿಯೋರ್ವ 7 ಸಾವಿರ ರೂಪಾಯಿ ಕಳವುಗೈದ ಘಟನೆ  ವರದಿಯಾಗಿದೆ.  ಕೆಳಗಿನ ಪೇಟೆಯ ಬಜಕೂಡ್ಲು ರಸ್ತೆ ಸಮೀಪವಿರುವ ಅಂಗಡಿಯಿಂದ ಹಣ ಕಳವು ನಡೆದಿದೆ. ಅಂಗಡಿಯ ಮಾಲಕ  ಸಮೀಪದ ಬೇರೊಂದು ಅಂಗಡಿಗೆ ತೆರಳಿ ಅಲ್ಪ ಹೊತ್ತಿನಲ್ಲೇ ಮರಳಿದ್ದು  ಈ ವೇಳೆ  ಡ್ರಾವರ್‌ನಲ್ಲಿದ್ದ 7 ಸಾವಿರ ರೂಪಾಯಿ ನಾಪತ್ತೆಯಾ ಗಿತ್ತು. ಇದರಿಂದ ಸಮೀಪದ ಸಿಸಿ ಟಿವಿ ಪರಿಶೀಲಿಸಿದಾಗ  ಪ್ಯಾಂಟ್, ಶರ್ಟ್ ಧರಿಸಿರುವ  ವ್ಯಕ್ತಿಯೋರ್ವ ಅಂಗಡಿಗೆ ನುಗ್ಗಿ ಡ್ರಾವರ್‌ನಿಂದ ಹಣ ತೆಗೆದು ಪರಾರಿಯಾಗುವ ದೃಶ್ಯ ಕಂಡುಬಂದಿದೆ.

You cannot copy contents of this page