ಕಾಸರಗೋಡು: ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರದಿಂದ ಕಳವು ನಡೆದಿದೆ. ನಿನ್ನೆ ರಾತ್ರಿ ಕಳವು ನಡೆದಿರಬೇಕೆಂದು ಶಂಕಿಸಲಾಗಿದೆ. ಕ್ಷೇತ್ರದ ಸೇವಾ ಕೌಂಟರ್, ಆಫೀಸ್, ಸ್ಟೋರ್ ರೂಂ ಎಂಬಿವುಗಳ ಬೀಗ ಮುರಿದು ಸೇವಾ ಕೌಂಟರ್‌ನಿಂದ 1000 ರೂ. ಕಳವು ಗೈಯ್ಯಲಾಗಿದೆ. ಆಫೀಸ್‌ನಿಂದ ಸಿಸಿ ಟಿವಿಯ ಹಾರ್ಡ್‌ಡಿಸ್ಕ್ ಕಳವು ನಡೆಸಲಾಗಿದೆ. ಸ್ಟೋರ್ ರೂಂನಿಂದ ಮೈಕ್‌ಸೆಟ್‌ನ ಆಂಪ್ಲಿಫಯರ್ ಕಳವು ನಡೆಸಿದ್ದರೂ ಅದನ್ನು ಉಪೇಕ್ಷಿಸಿರುವುದಾಗಿ ಪತ್ತೆ ಮಾಡಲಾಗಿದೆ. ಸಿಸಿಟಿವಿಯ ಹಾರ್ಡ್‌ಡಿಸ್ಕ್ ಕ್ಷೇತ್ರ ಆಡಳಿತ ಸಮಿತಿ ಸದಸ್ಯರು ನಡೆಸಿದ ಹುಡು ಕಾಟದಿಂದ ಬಾವಿಯಿಂದ ಪತ್ತೆ ಮಾಡಲಾಗಿದೆ. ಸಮಿತಿ ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್, ಪೊಲೀಸರಿಗೆ ದೂರು ನೀಡಿದ್ದಾರೆ. ಊರಿಡೀ ಕ್ಷೇತ್ರ ಕಳವು ಪ್ರಕರಣ ಹೆಚ್ಚುತ್ತಿದ್ದು, ಇಲ್ಲಿಯ ಕಳವು ಭಕ್ತರಲ್ಲಿ ಆತಂಕ ಸೃಷ್ಟಿಸಿದೆ.
