ಕಾಲೇಜಿಗೆ ಹೋದ ಬಾಲಕಿಗೆ ಹೊಟ್ಟೆನೋವು: ಆಸ್ಪತ್ರೆಗೆ ಕೊಂಡೊಯ್ದಾಗ ಹೆರಿಗೆ; ಮಂಜೇಶ್ವರ ಠಾಣೆ ವ್ಯಾಪ್ತಿಯ ಅಪ್ರಾಪ್ತನ ವಿರುದ್ಧ ಪೋಕ್ಸೋ ಕೇಸು

ಮಂಜೇಶ್ವರ: ಪಿಯುಸಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಘಟನೆಯಲ್ಲಿ ವಿಟ್ಲ ಪೊಲೀಸರು ದಾಖಲಿಸಿದ ಪ್ರಕರಣವನ್ನು ಮಂಜೇಶ್ವರ ಠಾಣೆಗೆ ವರ್ಗಾಯಿಸಲಾಗಿದೆ. ಬಾಲಕಿ ದೌರ್ಜನ್ಯಕ್ಕೆ ತುತ್ತಾಗಿರುವುದು ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಗಿರುವ ಕಾರಣ ಈ ಕೇಸನ್ನು ಮಂಜೇಶ್ವರ ಠಾಣೆಗೆ ವರ್ಗಾಯಿಸಲು ವಿಟ್ಲ ಠಾಣೆ ಪೊಲೀಸರು ತೀರ್ಮಾನಿಸಿದ್ದರು. ಈ ಪ್ರಕರಣದಲ್ಲಿ ಆರೋಪಿ ಬಾಲಕಿಯ ಸಂಬಂಧಿಕನಾದ ಮಂಜೇಶ್ವರ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದಾನೆ. ವಿಟ್ಲ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ನಿವಾಸಿಯಾಗಿದ್ದಾಳೆ ಬಾಲಕಿ. ಸೆ. 8ರಂದು ಕಾಲೇಜಿಗೆ ತಲುಪಿದ ಬಾಲಕಿಗೆ ಅಸ್ವಸ್ಥತೆ ಕಂಡುಬಂದ ಹಿನ್ನೆಲೆಯಲ್ಲಿ ಶಾಲಾ ಅಧಿಕಾರಿಗಳು ಬಾಲಕಿಯನ್ನು ಆಸ್ಪತ್ರೆಗೆ ತಲುಪಿಸಿದ್ದರು.

ಡಾಕ್ಟರ್ ನಡೆಸಿದ ತಪಾಸಣೆ ಯಲ್ಲಿ ಈಕೆ ಪೂರ್ಣ ಗರ್ಭಿಣಿ ಎಂದು ಖಚಿತಪಡಿಸಲಾಯಿತು. ಬಳಿಕ ಆಸ್ಪತ್ರೆಯಲ್ಲಿ ಈಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತಲುಪಿ ಈಕೆಯಿಂದ ಹೇಳಿಕೆ ದಾಖಲಿಸಿದ್ದು, ಆರೋಪಿ ಮಂಜೇಶ್ವರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ  ಅಪ್ರಾಪ್ತನೆಂದು   ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮಂಜೇಶ್ವರ ಠಾಣೆಗೆ ಹಸ್ತಾಂತರಿಸಲಾಗಿದೆ. ಬಾಲಕಿ ಹಾಗೂ ಈತ ಪ್ರೀತಿಸುತ್ತಿದ್ದರೆನ್ನಲಾಗಿದೆ.

RELATED NEWS

You cannot copy contents of this page