ಉಪ್ಪಳ: ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆದ ಪ್ರಕರಣದಲ್ಲಿ ಉಳ್ಳಾಲ ಪೊಲೀಸರು ಬಂಧಿಸಿ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ ವ್ಯಕ್ತಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಉಪ್ಪಳ ಮಣ್ಣಂಗುಳಿ ಪುದುಕುಡಿ ನಿವಾಸಿ ಹಮೀದ್ ಅಲಿ (65) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಿನ್ನೆ ಇವರು ಫ್ಲಾಟ್‌ನಲ್ಲಿ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಸೋಮ ವಾರ ರಾತ್ರಿ ತಲಪ್ಪಾಡಿಯಲ್ಲಿ ಕೇರಳ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆದು ಹಿಂಬದಿ ಗಾಜು ನಾಶಗೊಳಿಸಿದ ಪ್ರಕರಣದಲ್ಲಿ ಉಳ್ಳಾಲ ಪೊಲೀಸರು ಹಮೀದ್ ಅಲಿಯನ್ನು ಬಂಧಿಸಿದ್ದರು. ಬಳಿಕ ನೋಟೀಸು ನೀಡಿ ಇವರನ್ನು ಬಿಡುಗಡೆಗೊಳಿಸಲಾಗಿತ್ತು. ಮಂಗಳ ವಾರ ರಾತ್ರಿ ಇವರು ಪ್ಲಾಟ್‌ಗೆ ಮರಳಿ ತಲುಪಿದ್ದರು. ನಿನ್ನೆ ಬೆಳಿಗ್ಗೆ ಕೊಯಂ ಬತ್ತೂರಿನ ಸಂಬಂಧಿಕರ ಮನೆಗೆ ಹೋಗಿದ್ದ ಪತ್ನಿ ಖಮರುನ್ನೀಸ ಹಲವು ಬಾರಿ ಫೋನ್ ಕರೆ ಮಾಡಿದರೂ ಹಮೀದ್ ಅಲಿಯವರಿಂದ ಪ್ರತಿಕ್ರಿಯೆ ಉಂಟಾಗಲಿಲ್ಲ. ಇದರಿಂದ ಸಂಶಯಗೊಂಡ ಪತ್ನಿ ನೆರೆಮನೆ ನಿವಾಸಿಗಳಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದರು. ಅವರು ತಲುಪಿ ನೋಡಿದಾಗ ಹಮೀದ್ ಅಲಿ ಮನೆ ಯೊಳಗೆ ನೇಣುಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಮರಣೋ ತ್ತರ ಪರೀಕ್ಷೆ ನಡೆಸಲಾಯಿತು. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಮೃತರು ಪತ್ನಿ, ಮಕ್ಕಳಾದ ಅಲಿ, ಅನೀಸ, ಅಸ್ನ, ಸುಲೈಮಾನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







