ಬೋವಿಕ್ಕಾನ ಪೇಟೆಯಲ್ಲಿ ಬೀದಿನಾಯಿ ಕಾಟ: ವ್ಯಾಪಾರಿ ಸಹಿತ 3 ಮಂದಿಗೆ ಕಡಿತಬೋವಿಕ್ಕಾನ ಪೇಟೆಯಲ್ಲಿ ಬೀದಿನಾಯಿ ಕಾಟ

 ವ್ಯಾಪಾರಿ ಸಹಿತ ೩ ಮಂದಿಗೆಬೋವಿಕ್ಕಾನ: ಪೇಟೆಯಲ್ಲಿ ಬೀದಿನಾಯಿಗಳ ಉಪಟಳ ತೀವ್ರಗೊಂಡಿರುವುದಾಗಿ ದೂರಲಾಗಿದೆ. ವ್ಯಾಪಾರಿ ಸಹಿತ ಮೂರು ಮಂದಿಗೆ ನಾಯಿ ಕಚ್ಚಿದೆ. ನಿನ್ನೆ ಬೆಳಿಗ್ಗೆ 8 ಗಂಟೆಗೆ ಪೇಟೆಯ ಸಮೀಪದ ಮನೆ ಬಳಿ ನಿಂತಿದ್ದ ಸಿ.ಎಚ್. ಅಬ್ದುಲ್ಲ ಕುಂಞಿ ಎಂಬವರಿಗೆ ನಾಯಿ ಕಚ್ಚಿದೆ. ಬಳಿಕ  ಅಂಗಡಿ ತೆರೆಯಲು ತಲುಪಿದ ಅಚ್ಯುತನ್ ಎಂಬ ವ್ಯಾಪಾರಿಗೂ ನಾಯಿ ಆಕ್ರಮಿಸಿದೆ. ಕಾನತ್ತೂರು ರಸ್ತೆಯಲ್ಲಿ ಅಂಗಡಿ ತೆರೆಯಲು ತಲುಪಿದ ಮಹಿಳಾ ಟೈಲರ್‌ಗೂ ಕೂಡಾ ನಾಯಿ ಕಚ್ಚಿದೆ. ಇವರ ಮುಖಕ್ಕೆ ಗಾಯವುಂಟಾಗಿದೆ. ಈ ಮೂರು ಮಂದಿಯನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಮೂವರಿಗೂ ಕಪ್ಪು ಬಣ್ಣದ ಬೀದಿನಾಯಿ ಕಚ್ಚಿರುವುದಾಗಿ ಅದು ಹುಚ್ಚು ನಾಯಿಯಾಗಿರಬೇಕೆಂದು ಹೇಳಲಾಗುತ್ತಿದೆ.

ಸೋಮವಾರ ಸಂಜೆ ಆಲೂರು ಭಾಗದಲ್ಲಿರುವ ಮೂರು ಮಂದಿಗೂ ಇದೇ ನಾಯಿ ಕಚ್ಚಿತ್ತೆನ್ನಲಾಗಿದೆ. ಪೇಟೆಯಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಕಾಟ ತೀವ್ರಗೊಂಡಿದ್ದು, ಪರಿಹಾರ ಉಂಟಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕಡಿತ

You cannot copy contents of this page