ನೀರ್ಚಾಲು: ನೀರ್ಚಾಲು ಪರಿಸರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಉಪಟಳ ತೀವ್ರಗೊಂಡಿ ದೆ. ನಿನ್ನೆ ಪುಟ್ಟ ಮಗು ಸಹಿತ ಆರು ಮಂದಿಗೆ ಬೀದಿ ನಾಯಿಗಳು ಕಡಿದು ಗಾಯಗೊಳಿಸಿವೆ. ನಿನ್ನೆ ಸಂಜೆ 5 ಗಂಟೆಗೆ ಏಣಿಯರ್ಪಿನಲ್ಲಿ ಬೀದಿ ನಾಯಿಗಳು ಜನರ ಮೇಲೆ ದಾಳಿ ನಡೆಸಿವೆ. ಏಣಿಯರ್ಪು ನಿವಾಸಿ ಆಟೋ ಚಾಲಕ ಹರಿಹರನ್‌ರ ಪುತ್ರಿ ನವಣ್ಯ (3), ಬಿರ್ಮಿನಡ್ಕ ಅಂಗನವಾಡಿ ನೌಕರೆ ಜೋನ್ಸಿ ಯಾನೆ ಅಶ್ವತಿ (48) ಏಣಿಯರ್ಪು ಲೈಫ್ ವಿಲ್ಲಾದ ರಿಸ್ವಾನ (19), ಪುದುಕೋಳಿಯ ಶಾಂತಿ (10), ಚಂದ್ರನ್ (38), ಬದಿಯಡ್ಕದ ಗಣೇಶ್ (31) ಎಂಬಿವರಿಗೆ ನಾಯಿಗಳ ಕಡಿತದಿಂದ ಗಾಯಗಳಾಗಿವೆ. ಮಗು ನವಣ್ಯ ಮನೆಯ ಸಿಟೌಟ್‌ನಲ್ಲಿ ಆಟವಾಡುತ್ತಿದ್ದಾಗ ಬೀದಿ ನಾಯಿಗಳು ದಾಳಿ ನಡೆಸಿವೆ. ಮನೆಯವರು ಕೂಡಲೇ ನಾಯಿಗಳನ್ನು ಓಡಿಸಿದುದರಿಂದ ಭಾರೀ ಅಪಾಯ ತಪ್ಪಿದೆ. ಮಗುವಿಗೆ ಕಾಸರಗೋಡಿನ ಖಾಸಗಿ ಆಸತ್ರೆಯಲ್ಲಿ, ಇತರ ಐದು ಮಂದಿಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
