ಕಾಸರಗೋಡು: ಕೋಳಿ ಸಾಕಣಾ ಫಾಂಗೆ ರಾತ್ರಿ ವೇಳೆ ಬೀದಿ ನಾಯಿಗಳು ನುಗ್ಗಿ 542 ಕೋಳಿಗಳನ್ನು ಕೊಂದು ಹಾಕಿದ ಘಟನೆ ನಡೆದಿದೆ. ಭೀಮನಡಿ ಮಾಂಕೋಡು ವಿಲಂಗಿಲೆ ಮಟ್ಟತ್ತಿಲ್ ಜೋನಿ ಎಂಬವರ ಕೋಳಿಗಳನ್ನು ಬೀದಿನಾಯಿಗಳು ಈ ರೀತಿ ಕೊಂದುಹಾಕಿವೆ. ರಾತ್ರಿ ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ಬೀದಿ ನಾಯಿಗಳು ಫಾಂನೊಳಗೆ ನುಗ್ಗಿ ಕೋಳಿಗಳನ್ನು ಕೊಂದು ಹಾಕಿದ್ದು, ಅದು ಬೆಳಗ್ಗಿನ ವೇಳೆಯಷ್ಟೇ ಮನೆಯವರ ಗಮನಕ್ಕೆ ಬಂದಿದೆ.
