ಸಜಂಕಿಲದಲ್ಲಿ ಕಣ್ಮುಚ್ಚಿದ ಬೀದಿ ದೀಪ: ದುರಸ್ತಿಗೆ ಆಗ್ರಹ

ಪೈವಳಿಕೆ: ಪಂಚಾಯತ್‌ನ 11ನೇ ವಾರ್ಡ್ ಸಜಂಕಿಲ ಪರಿಸರದಲ್ಲಿ ದಾರಿ ದೀಪ ಕೆಟ್ಟು ಹೋಗಿ ತಿಂಗಳು ಕಳೆದರೂ ದುರಸ್ತಿಗಾಗಿ ವಾರ್ಡ್ ಪ್ರತಿನಿಧಿ ಹಾಗೂ ಮಾಜಿ ಪ್ರತಿನಿಧಿ ಮನವಿ ನೀಡಿದರೂ ಯಾವುದೇ ಕ್ರಮ ಉಂಟಾಗಿಲ್ಲವೆಂದು ದೂರಿದ್ದಾರೆ. ವಾರ್ಡ್ ಪ್ರತಿನಿಧಿ ಗೀತಾ ನಾಯ್ಕ್, ಬಿಜೆಪಿ ಮುಖಂಡ, ಮಾಜಿ ಪಂ.ಸದಸ್ಯ ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ ಈ ಬಗ್ಗೆ ಅಧಿಕಾರಿಗಳಿಗೆ ಈ ಹಿಂದೆಯೇ ದೂರು ನೀಡಿದ್ದರು.

ಸರ್ಕುತ್ತಿ, ಸಜಂಕಿಲ, ಆವಳಮಠ ಪ್ರದೇಶದಲ್ಲಿನ ಸುಮಾರು ೧೦ರಷ್ಟು ಬೀದಿ ದೀಪ ಕೆಟ್ಟು ತಿಂಗಳು ಕಳೆದಿದೆ. ಈ  ಪ್ರದೇಶ ಈಗಲೂ ಕತ್ತಲಾವರಿಸಿದೆ.  ಇದರಿಂದಾಗಿ ಈ ಪ್ರದೇಶದ ಜನರು ಸಮಸ್ಯೆಗೀಡಾಗಿದ್ದಾರೆ. ಹಳ್ಳಿ ಪ್ರದೇಶವಾದ ಕಾರಣ ದೂರ ಕೆಲಸಕ್ಕೆ ಹಾಗೂ ಇತರ ಕಾರ್ಯಗಳಿಗೆ ತೆರಳಿದವರು  ರಾತ್ರಿ ವೇಳೆ ಊರಿಗೆ ಹಿಂತಿರುಗುವಾಗ ಇತರರಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೆ ವಿಷ ಜಂತುಗಳ ಹಾವಳಿಯ ಭೀತಿಯೂ ಇದೆ. ಆದ್ದರಿಂದ ಶೀಘ್ರ ಬೀದಿ ದೀಪ ದರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page