ಹಿಂದಕ್ಕೆ ಚಲಿಸಿದ ಟೆಂಪೋ ಟ್ರಾವಲರ್ ಬೈಕ್‌ಗೆ ಢಿಕ್ಕಿ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ಪೆಟ್ರೋಲ್ ಪಂಪ್‌ನಿಂದ ಹಿಂದಕ್ಕೆ ಚಲಿಸಿದ ಟೆಂಪೋ ಟ್ರಾವಲರ್ ಬೈಕ್‌ಗೆ ಢಿಕ್ಕಿ ಹೊಡೆದು ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ಕಾರಮಲ ನಿವಾಸಿಯೂ ಮಂಗಳೂರಿನಲ್ಲಿ ವಿದ್ಯಾರ್ಥಿಯಾಗಿರುವ ಕಂಡತ್ತಿಲ್ ಅಲ್ಬರ್ಟ್ ಜೋಯಿಸ್ (20) ಎಂಬವರು ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ನಿನ್ನೆ ಸಂಜೆ ೫ ಗಂಟೆಗೆ ಮಲೆನಾಡು ಹೆದ್ದಾರಿಯಲ್ಲಿ ಚಿಟ್ಟಾರಿಕಲ್ ನಾಯರ ಪೆಟ್ರೋಲ್ ಪಂಪ್ ಸಮೀಪ ಅಪಘಾತವುಂ ಟಾಗಿದೆ. ಗಂಭೀರ ಗಾಯಗೊಂಡ ಅಲ್ಬರ್ಟ್‌ರನ್ನು ಚೆರುಪುಳದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಕಾರಮಲ ನಿವಾಸಿ ದಿ| ಕಂಡತ್ತಿಲ್ ಜೋಯಿಸ್‌ರ ಪುತ್ರನಾದ ಮೃತರು ತಾಯಿ ಬೀಬಿ, ಸಹೋದರಿ ಆಂಡ್ರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page