ಆಸ್ಪತ್ರೆ ಶೌಚಾಲಯದಲ್ಲಿ ವಿದ್ಯಾರ್ಥಿನಿ ಹೆರಿಗೆ : ಮಗುವನ್ನು ವೆಂಟಿಲೇಶನ್ ಮೂಲಕ ಎಸೆದು ಕೊಲೆಗೆತ್ನ

ಆಲಪ್ಪುಳ: ಹೊಟ್ಟೆನೋವು ಚಿಕಿತ್ಸೆಗಾಗಿ ಆಸ್ಪತ್ರೆಗೆ ತಲುಪಿದ ವಿದ್ಯಾರ್ಥಿನಿ ಅಲ್ಲಿನ ಶೌಚಾಲ ಯದಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಹರಿಪ್ಪಾಡ್ ಸರಕಾರಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ 1 ಗಂಟೆಗೆ ಈ ಘಟನೆ ನಡೆದಿದೆ. ಹೆರಿಗೆಯಾದ ಕೂಡಲೇ ಮಗುವನ್ನು ವೆಂಟಿಲೇಶನ್ ಮೂಲಕ ಹೊರಗೆ ಎಸೆದಿದ್ದಾಳೆ. ಮಗು  ಬೀದಿ ನಾಯಿಗಳು ಬೀಡು ಬಿಟ್ಟಿರುವ ಸ್ಥಳದಲ್ಲಿ ಬಿದ್ದಿದೆ.  ಮಗುವಿನ ಅಳು ಕೇಳಿ ಭದ್ರತಾ ನೌಕರರು ಹಾಗೂ ಆಸ್ಪತ್ರೆ ನೌಕರರು ಸ್ಥಳಕ್ಕೆ ತಲುಪಿದ್ದು, ಮಗುವನ್ನು ಮೇಲೆತ್ತಿ ಅಪಾಯದಿಂದ ಪಾರುಮಾಡಿದ್ದಾರೆ. ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರುಗಳಾದ ನಿಶಾ,ಆಲ್ಫಿ, ನರ್ಸಿಂಗ್ ಆಫೀಸರ್ ಜಿಶಾ, ಅಸಿಸ್ಟೆಂಟ್‌ಗಳಾದ ಅನಿಲ್, ರೆಜಿನ ಎಂಬಿವರು ಸಕಾಲದಲ್ಲಿ ನಡೆಸಿದ ರಕ್ಷಣಾ ಕಾರ್ಯದಿಂದ ಮಗು ಅಪಾಯದಿಂದ ಪಾರಾಗಿದೆ.  ಮಗು ವಿಗೆ ಯಾವುದೇ ಗಾಯಗಳಾಗಿ ಲ್ಲವೆಂದು ವೈದ್ಯರು ತಿಳಿಸಿದ್ದಾರೆ.

ಯುವತಿ ಹಾಗೂ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ತಜ್ಞ ಚಿಕಿತ್ಸೆಗಾಗಿ ಅವರನ್ನು ಆಲಪ್ಪುಳ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.  ಇದೇ ವೇಳೆ ವಿದ್ಯಾರ್ಥಿನಿ ಯಾರಿಂದ ಗರ್ಭ ಧರಿಸಿದ್ದಾಳೆಂದು ತಿಳಿದುಬಂದಿಲ್ಲ. ಈ ಕುರಿತು ಹರಿಪ್ಪಾಡ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page