ಪೇರಾಲ್ ಕಣ್ಣೂರು ದರ್ಸ್‌ನಿಂದ ವಿದ್ಯಾರ್ಥಿ ನಾಪತ್ತೆ

ಕುಂಬಳೆ: ಪೇರಾಲ್ ಕಣ್ಣೂರು ಜುಮಾ ಮಸೀದಿ ಅಧೀನದಲ್ಲಿರುವ ಸೀದಿ ವಲಿಯುಲ್ಲಾಹಿ ದರ್ಗಾ ಶರೀಫ್ ದರ್ಸ್‌ನಿಂದ ವಿದ್ಯಾರ್ಥಿ ಯೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕುಂಬಳೆ ಕೋಟೆಕಾರ್‌ನ ಮೂಸಾ ಎಂಬವರ ಪುತ್ರ ಹಸನ್ (12) ಎಂಬಾತ ನಿನ್ನೆ ರಾತ್ರಿ 8 ಗಂಟೆ ಬಳಿಕ ದರ್ಸ್‌ನಿಂದ ನಾಪತ್ತೆಯಾಗಿದ್ದಾನೆ. ಈ ಕುರಿತು ತಂದೆ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಾಪತ್ತೆ ವೇಳೆ ಬಾಲಕನ ಕೈಯಲ್ಲಿ ಹಳದಿ ಬಣ್ಣದ ಬ್ಯಾಗ್ ಇದ್ದಿರುವುದಾಗಿಯೂ ನಸುಕಂದು ಬಣ್ಣದ ಜುಬ್ಬಾ ಧರಿಸಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page