ಮಂಜೇಶ್ವರ: 19ರ ಹರೆಯದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಯಾಗಿದ್ದು ಮನೆಯವರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ಕೊಂಡಿ ದ್ದಾರೆ. ಕೋಳ್ಯೂರು ಮದರಿಕ್ಕಾಡ್ ನಿವಾಸಿ ರಕ್ಷಿತ (19) ನಾಪತ್ತೆಯಾದ ವಿದ್ಯಾರ್ಥಿನಿ. ನಿನ್ನೆ ಬೆಳಿಗ್ಗೆ ಕಾಲೇಜಿಗೆ ಹೋಗುವುದಾಗಿ ತಿಳಿಸಿ ಹೋದ ನಂತರ ಮನೆಗೆ ಹಿಂತಿರುಗಿಲ್ಲವೆಂದು ಆಕೆಯ ತಂದೆ ಅಬ್ಬಣ್ಣು ಕೆ ದೂರು ನೀಡಿದ್ದು ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.






