ಕಾಸರಗೋಡು: ಶಾಲೆಯಿಂದ ನಾಪತ್ತೆಯಾಗಿದ್ದ 16, 17 ವರ್ಷ ಪ್ರಾಯದ ವಿದ್ಯಾರ್ಥಿ, ವಿದ್ಯಾರ್ಥಿನಿ ಮನೆಗೆ ತಲುಪಿದ್ದಾರೆ. ನಿನ್ನೆ ರಾತ್ರಿ ಇವರಿಬ್ಬರು ಹಿಂತಿರುಗಿದ್ದಾರೆ. ಬೇಕಲ ಪೊಲೀಸ್ ಸಬ್ ಡಿವಿಶನ್ ವ್ಯಾಪ್ತಿಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರ ವಿದ್ಯಾರ್ಥಿಗಳಾದ ಇವರಿಬ್ಬರು ಬುಧವಾರ ಅಪರಾಹ್ನ ನಾಪತ್ತೆಯಾಗಿದ್ದರು. ಮಧ್ಯಾಹ್ನದವರೆಗೆ ಇವರಿಬ್ಬರು ತರಗತಿಯಲ್ಲಿದ್ದರು. ನಾಪತ್ತೆಯಾದ ಬಗ್ಗೆ ಶಾಲಾ ಅಧಿಕಾರಿಗಳು ಪೊಲೀಸರು, ಹೆತ್ತವರಿಗೆ ಮಾಹಿತಿ ನೀಡಿದ್ದರು. ನಿನ್ನೆ ಮಧ್ಯಾಹ್ನದ ವರೆಗೆ ಇವರಿಬ್ಬರು ಹಿಂತಿರುಗದ ಹಿನ್ನೆಲೆಯಲ್ಲಿ ಪೊಲೀ ಸರು ಕೇಸು ದಾಖಲಿಸಿದ್ದರು. ತನಿಖೆ ತೀವ್ರಗೊಳಿಸುತ್ತಿದ್ದ ಮಧ್ಯೆ ಇವರಿ ಬ್ಬರೂ ಹಿಂತಿರುಗಿದ್ದಾರೆ. ವಿದ್ಯಾರ್ಥಿ ನಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.






