ಸುಲ್ತಾನ್ ಡಿಯರ್ ಪೇರೆಂಟ್ ಹೆತ್ತವರಿಗೆ ತರಬೇತಿ ತರಗತಿ

ಕಾಸರಗೋಡು: ಕುಣಿಯ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪಿಟಿಎ ಸಮಿತಿ ಹಾಗೂ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಆಶ್ರಯದಲ್ಲಿ ಡಿಯರ್ ಪೇರೆಂಟ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪಿಟಿಎ ಅಧ್ಯಕ್ಷ ಎ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದು, ಕಾಸರಗೋಡು ನಾರ್ಕೋಟಿಕ್ ಡಿವೈಎಸ್‌ಪಿ ಡಾ. ವಿ. ಬಾಲಕೃಷ್ಣನ್ ಉದ್ಘಾಟಿಸಿದರು. ಜೇಸಿಸ್ ಅಂತಾರಾಷ್ಟ್ರೀಯ ತರಬೇತುದಾರ ವಿ. ವೇಣುಗೋಪಾಲನ್ ತರಗತಿ ನಡೆಸಿದರು. ಸುಲ್ತಾನ್ ಕಾಞಂಗಾಡ್ ಶೋರೂಂ ಮೆನೇಜರ್ ಇಕ್ಬಾಲ್, ಮದರ್ ಪಿಟಿಎ ಅಧ್ಯಕ್ಷೆ ತಸ್ನೀಮ ಬದ್ರುದ್ದೀನ್, ಸ್ಟಾಫ್ ಸೆಕ್ರೆಟರಿ ಪಿ. ರಾಜನ್, ಎಸ್‌ಆರ್‌ಜಿ ಕನ್ವೀನರ್ ವಿಜಿ, ಪ್ರೇಮ ಟೀಚರ್, ಪ್ರವೀಣ್ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಮಿನಿ ಕೆ.ವಿ.ಸ್ವಾಗತಿಸಿದರು.

You cannot copy contents of this page